Sunday, April 20, 2025
Google search engine

Homeಅಪರಾಧಅಬಕಾರಿ ನೀತಿ ಪ್ರಕರಣ: ಜು.೧೨ರವರೆಗೆ ಕೇಜ್ರಿವಾಲ್ ನ್ಯಾಯಾಂಗ ಬಂಧನ ವಿಸ್ತರಣೆ

ಅಬಕಾರಿ ನೀತಿ ಪ್ರಕರಣ: ಜು.೧೨ರವರೆಗೆ ಕೇಜ್ರಿವಾಲ್ ನ್ಯಾಯಾಂಗ ಬಂಧನ ವಿಸ್ತರಣೆ

ನವದೆಹಲಿ: ದೆಹಲಿ ಮದ್ಯ ಅಬಕಾರಿ ನೀತಿ ೨೦೨೧-೨೨ಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಜುಲೈ ೧೨ ರವರೆಗೆ ವಿಸ್ತರಿಸಿದೆ.

ಏಪ್ರಿಲ್ ೨೨ ರಂದು ನ್ಯಾಯಾಲಯದ ಆದೇಶಗಳಿಗೆ ಅನುಸಾರವಾಗಿ ಏಮ್ಸ್ ರಚಿಸಿದ ವಿಶೇಷ ಮಂಡಳಿಯೊಂದಿಗೆ ವೈದ್ಯಕೀಯ ಸಮಾಲೋಚನೆ ನಡೆಸುವಾಗ ತಮ್ಮ ಪತ್ನಿಯ ಉಪಸ್ಥಿತಿಯನ್ನು ಕೋರಿ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯ ಮೇಲಿನ ಆದೇಶಗಳನ್ನು ನ್ಯಾಯಾಲಯ ಕಾಯ್ದಿರಿಸಿದೆ. ನ್ಯಾಯಾಲಯವು ಜುಲೈ ೬ ರಂದು ತನ್ನ ಆದೇಶಗಳನ್ನು ಪ್ರಕಟಿಸಲಿದೆ.

ಮತ್ತೊಂದೆಡೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಅವರಿಗೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುತ್ತಾ ಅಂತ ಕಾದು ನೋಡಬೇಕಿದೆ.

RELATED ARTICLES
- Advertisment -
Google search engine

Most Popular