ಮೈಸೂರು: ವೈದ್ಯರು ಭೂಮಿ ಮೇಲಿರುವ ವಿಷ್ಣುವಿನ ರೂಪ ಎಂದು ಸಮಾಜ ಸೇವಕ ರಘುರಾಮ್ ವಾಜಪೇಯಿ ಅಭಿಪ್ರಾಯಪಟ್ಟರು.
ನಗರದ ಜಿ ಪತ್ರಕರ್ತರ ಭವನದಲ್ಲಿ ಶ್ರೀವಾಸುದೇವ ಮಹರಾಜ್ ಫೌಂಡೇಶನ್ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಬಿ.ಸಿ.ರಾಯ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಸನಾತನ ಪರಂಪರೆಯಯಲ್ಲಿ ನಮ್ಮ ಪೂರ್ವಜರ ನಡೆ ನುಡಿಗಳನ್ನು ಅನುಕರಣೆ ಮಾಡುವಂತಹ ವಿಶಿಷ್ಟ ಪರಂಪರೆ ಇಂದಿಗೂ ಇದೆ. ಅಲ್ಲದೇ ವೈದ್ಯರನ್ನು ನಾರಾಯಣ, ಹರಿಗೆ ಹೋಲಿಕೆ ಮಾಡಲಾಗಿದೆ. ವೈದ್ಯರ ಅಮೋಘ ಸೇವೆಯಿಂದ ಜನ ಸಾಮಾನ್ಯರು ಆರೋಗ್ಯಪೂರ್ಣ ಜೀವನ ನಡೆಸಲು ಸಾಧವಾಗುತ್ತಿದೆ ಎಂದು ಹೇಳಿದರು.
ಡಾ.ಬಿ.ಸಿ.ರಾಯ್ ಅವರು ವೃತ್ತಿಯಲ್ಲಿ ವೈದ್ಯರಾದರೂ, ಮಹಾತ್ಮ ಗಾಂಧಿ ವಿಚಾರಗಳಿಂದ ಹೆಚ್ಚು ಪ್ರಭಾವಿತರಾಗಿದ್ದರು. ಇದು ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡವರು. ಅವರ ಜನಪರ ಸೇವೆಗೆ ಮಾರುಹೋದ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಾಡಿದರು. ರಾಜಕಾರಣಿಯಾಗಿ ಜನಾನುರಾಗಿಯಾಗಿದ್ದ ಬಿ.ಸಿ.ರಾಯ್ ಅವರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ಪ್ರತಿನಿತ್ಯ ಸಂಜೆ ತಮ್ಮ ಕ್ಲಿನಿಕ್‌ನಲ್ಲಿ ಬಡಜನರಿಗೆ ಚಿಕಿತ್ಸೆ ನೀಡುವುದನ್ನು ತಮ್ಮ ಕೊನೆಯ ದಿನದವರೆಗೂ ಮುಂದುವರಿಸಿದರು. ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ವೈದ್ಯ ದಿನಾಚರಣೆಯಾಗಿ ಆಚರಣೆ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಇಂದು ಸನ್ಮಾನಗೊಳ್ಳುತ್ತಿರುವ ಇಬ್ಬರೂ ವೈದ್ಯರು ಮೈಸೂರಿನ ಬಡ ರೋಗಿಗಳಿಗೆ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸುತಿzರೆ. ನಗರದ ಬಡಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತಿದ್ದಾರೆ. ಅವರ ಅಮೋಘ ಸೇವೆ ಮತ್ತಷ್ಟು ಜನರಿಗೆ ತಲುಪಲಿ ಎಂದು ಆಶಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ನಾನು ಇಂದು ಶಾಸಕನಾಗಿ ಈ ಸಮಾರಂಭದಲ್ಲಿ ಭಾಗವಸಹಿಲು ವೈದ್ಯರೇ ಕಾರಣ. ಈ ಹಿಂದೆ ನಾನು ಸೇನೆಯಲ್ಲಿzಗ ನನ್ನ ದೇಹಕ್ಕೆ ಗುಂಡು ಬಿzಗ ಅಂದು ವೈದ್ಯರು ಜನ್ನ ಜೀವ ಉಳಿಸಿದರು ಎಂದು ಸ್ಮರಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಪೂರ್ಣಿಮ ಆಸ್ಪತ್ರೆಯ ನಿರ್ದೇಶಕಿ ಹಾಗೂ ಪ್ರಸೂತಿ ತe ಡಾ.ಪೂರ್ಣಿಮ ಮಧುಸೂದನ್ ಹಾಗೂ ರಾಮಕೃಷ್ಣ ನರ್ಸಿಂಗ್ ಹೋಮ್‌ನ ನಿರ್ದೇಶಕಿ ಡಾ.ಕೆ.ವಿ.ಲಕ್ಷ್ಮೀದೇವಿ ಅವರಿಗೆ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.
ಸಮಾರಂಧದಲ್ಲಿ ವಾಸುದೇವ ಮಹಾರಾಜ್ ಫೌಂಡೇಶನ್ ಅಧಕ್ಷ ಎಂ.ವಿ.ನಾಗೇಂದ್ರ ಬಾಬು, ಜಯರಾಜ್ ಇದ್ದರು.