Sunday, April 20, 2025
Google search engine

Homeಅಪರಾಧಮಹಿಳೆಗೆ ಮಂಪರು ಔಷಧ ನೀಡಿ, ಸಹಚರನ ಜತೆ ಸೇರಿ ರಿಯಲ್​ ಎಸ್ಟೇಟ್​ ಉದ್ಯಮಿಯಿಂದ ಅತ್ಯಾಚಾರ

ಮಹಿಳೆಗೆ ಮಂಪರು ಔಷಧ ನೀಡಿ, ಸಹಚರನ ಜತೆ ಸೇರಿ ರಿಯಲ್​ ಎಸ್ಟೇಟ್​ ಉದ್ಯಮಿಯಿಂದ ಅತ್ಯಾಚಾರ

ಹೈದರಾಬಾದ್: ಮಂಪರು ಬರುವ ಔಷಧ ನೀಡಿ ರಿಯಲ್​ ಎಸ್ಟೇಟ್​ ಉದ್ಯಮಿಯೊಬ್ಬರು ತನ್ನ ಸಹಚರನ ಜತೆ ಸೇರಿ ಕಾರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಹೈದರಾಬಾದ್ ​ನಲ್ಲಿ ನಡೆದಿದೆ.

ಆರೋಪಿಗಳಾದ ಜನಾರ್ಧನ್ ಮತ್ತು ಸಂಗ ರೆಡ್ಡಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಮಿಯಾಪುರಕ್ಕೆ ಹೋಗಿದ್ದೆ, ಅಲ್ಲಿ ಜಾಗದ ವಿಚಾರವಾಗಿ ಯಾದಗಿರಿಗುಟ್ಟಕ್ಕೆ ಹೋಗಲು ಇಬ್ಬರು ವ್ಯಕ್ತಿಗಳು ನನ್ನನ್ನು ಕರೆದುಕೊಂಡು ಹೋಗಿದ್ದರು. ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ರಾತ್ರಿ ಹಿಂದಿರುಗುವಾಗ, ಅವರು ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ನಿಲ್ಲಿಸಿದರು. ಕಾರು ಕೆಟ್ಟುಹೋಗಿದೆ ಎಂದು ಅವರು ಹೇಳಿದರು.

ಇಬ್ಬರು ಆಕೆಗೆ ಊಟ ಕೊಟ್ಟಿದ್ದರು ಆದರೆ ಆಕೆ ಅದನ್ನು ನಿರಾಕರಿಸಿದ್ದರು, ಬಳಿಕ ಕುಡಿಯಲು ತಂಪು ಪಾನೀಯವನ್ನು ಕೊಟ್ಟಿದ್ದರು, ಅದನ್ನು ಕುಡಿಯುವಂತೆ ಮನವೊಲಿಸಿದರು ಕುಡಿದ ಬಳಿಕ ತಲೆ ತಿರುಗಲು ಶುರುವಾಗಿತ್ತು.

ಇದೇ ಸಮಯವನ್ನು ದುರ್ಬಳಕೆ ಮಾಡಿಕೊಂಡ ವ್ಯಕ್ತಿಗಳು ಕಾರಿನಲ್ಲಿ ಆಕೆಯನ್ನು ವಿವಸ್ತ್ರಗೊಳಿಸಿ ಬೆಳಗಿನ ಜಾವದವರೆಗೂ ಆತ್ಯಾಚಾರ ನಡೆಸಿದ್ದಾರೆ. ಬಳಿಕ ಆಕೆಗೆ ಥಳಿಸಿದ್ದಾರೆ. ಇದಾದ ಬಳಿಕ ಆಕೆಯನ್ನು ಮಿಯಾಪುರ ಹಾಸ್ಟೆಲ್ ​ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular