Wednesday, April 23, 2025
Google search engine

Homeಸ್ಥಳೀಯಮಂಡ್ಯದ ಗಾಂಧಿ ಸ್ಪೀಕರ್ ಕೃಷ್ಣರವರ ೮೩ನೇ ಜನ್ಮದಿನ ಆಚರಣೆ

ಮಂಡ್ಯದ ಗಾಂಧಿ ಸ್ಪೀಕರ್ ಕೃಷ್ಣರವರ ೮೩ನೇ ಜನ್ಮದಿನ ಆಚರಣೆ


ಕೃಷ್ಣರಾಜಪೇಟೆ: ಕಲುಷಿತಗೊಂಡಿರುವ ಇಂದಿನ ರಾಜಕಾರಣದಲ್ಲಿ ಪ್ರಾಮಾಣಿಕತೆ ಹಾಗೂ ಮೌಲ್ಯಗಳನ್ನು ಉಳಿಸಿಕೊಂಡು ಶ್ರೀಸಾಮಾನ್ಯರ ಮಧ್ಯದಲ್ಲಿದ್ದುಕೊಂಡು ಕೆಲಸ ಮಾಡಿದ ಸರಳ ಸಜ್ಜನ ರಾಜಕಾರಣಿ ಮಾಜಿ ಸ್ಪೀಕರ್ ಕೃಷ್ಣರವರ ಆದರ್ಶಗಳು ಇಂದಿನ ರಾಜಕಾರಣಿಗಳು ಹಾಗೂ ಯುವ ಜನರಿಗೆ ಮಾದರಿಯಾಗಿವೆ ಎಂದು ರಾಜ್ಯದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಹೇಳಿದರು ಅವರು ಇಂದು ಕೆ ಆರ್ ಪೇಟೆ ಪಟ್ಟಣದಲ್ಲಿ ಮಾಜಿ ಸ್ಪೀಕರ್ ಕೃಷ್ಣ ಅವರ ೮೩ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ನಡೆದ ಕೃಷ್ಣ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದರು.ಕೃಷ್ಣ ಅವರಂತಹ ಮೌಲ್ಯಾಧಾರಿತ ರಾಜಕಾರಣಿಗಳು ಇಂದಿನ ದಿನಮಾನದಲ್ಲಿ ಅಪರೂಪವಾಗುತ್ತಿದ್ದಾರೆ.ಕೃಷ್ಣರ ಆದರ್ಶಗಳು ಹಾಗೂ ಪ್ರಾಮಾಣಿಕತೆಯನ್ನು ನಮ್ಮ ಮುಂದಿನ ಯುವ ಜನಾಂಗಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಅವಶ್ಯಕತೆ ಇರುವುದರಿಂದ ಕೃಷ್ಣ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಿರುವ ಇಂದಿನ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ.ನುಡಿದಂತೆ ನಡೆಯುವ ನೇರ ನಿಷ್ಠುರವಾದಿ ರಾಜಕಾರಣಿ ಆಗಿದ್ದ ಕೃಷ್ಣ ಅವರು ತಮ್ಮ ಜೀವನದುದ್ದಕ್ಕೂ ಗಾಂಧಿ ಗಿರಿಯನ್ನು ಮೈಗೂಡಿಸಿಕೊಂಡು ಸರಳವಾಗಿ ಜೀವನವನ್ನು ನಡೆಸಿದರು.ಕೃಷ್ಣ ಅವರ ಆದರ್ಶ ಗುಣಗಳನ್ನು ನಮ್ಮ ಮುಂದಿನ ತಲೆಮಾರಿಗೆ ತಲುಪಿಸುವ ದೃಷ್ಟಿಯಿಂದ ಇಂದಿನ ಹುಟ್ಟುಹಬ್ಬದ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ ಆದ್ದರಿಂದ ನಾನು ಕಾರ್ಯಕ್ರಮದ ಸಂಘಟಕರನ್ನು ಅಭಿನಂದಿಸುತ್ತೇನೆ. ಕೃಷ್ಣ ಪ್ರತಿಷ್ಠಾನದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯಗಳು ನನ್ನ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಚೆಲುರಾಯಸ್ವಾಮಿ ಹೇಳಿದರು.ರಾಜ್ಯದ ಅಕ್ರಮ ಭೂ ಒತ್ತುವರಿ ತೆರವು ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎ ಟಿ ರಾಮಸ್ವಾಮಿ ಮಾತನಾಡಿ ಕೃಷ್ಣ ಅವರ ರಾಜಕೀಯ ಜೀವನ ಒಂದು ತೆರೆದ ಪುಸ್ತಕವಿದ್ದಂತೆ.೪೦ ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಪ್ರಾಮಾಣಿಕ ಆಡಳಿತ ನೀಡಿದ ಕೃಷ್ಣ ಅವರು ತಮ್ಮ ಮನೆ ಬಾಗಿಲಿಗೆ ಗುತ್ತಿಗೆದಾರರೊಬ್ಬರು ತೆಗೆದುಕೊಂಡು ಹೋಗಿದ್ದ ಹಣವನ್ನು ಸ್ವೀಕರಿಸದೆ ಗೆಟೌಟ್ ಎಂದು ಹೇಳಿದ ದಿಟ್ಟ ಧೀಮಂತ ರಾಜಕಾರಣಿ ಎಂದರೆ ಅದು ಕೆ ಆರ್ ಪೇಟೆ ಕೃಷ್ಣ ಮಾತ್ರ.ಕೃಷ್ಣ ಅವರು ನನ್ನ ಗುರುಗಳು ಎಂದು ಹೇಳಿಕೊಳ್ಳಲು ನನಗೆ ಅಭಿಮಾನ ಎನಿಸುತ್ತದೆ ಎಂದು ಹೇಳಿದ ರಾಮಸ್ವಾಮಿ ಕಲುಹಿತಗೊಂಡಿರುವ ಹಿಂದಿನ ರಾಜಕೀಯ ರಂಗದಲ್ಲಿ ಕೃಷ್ಣ ಅವರಂತಹ ಪ್ರಾಮಾಣಿಕರು ಸಿಗುವುದು ವಿರಳ.ಮಂಡ್ಯದ ಗಾಂಧಿ ಎಂಬ ಹೆಸರಿಗೆ ಭಾಜನರಾಗಿ ಹತ್ತು ಹಲವು ಸಾಧನೆಗಳನ್ನು ಮಾಡಿದ ಕೃಷ್ಣ ಇತಿಹಾಸ ನಿರ್ಮಿಸಿದ್ದಾರೆ ಎಂದು ಗುಣಗಾನ ಮಾಡಿದರು.ಮಾಜಿ ಸಚಿವ ಡಾ.ನಾರಾಯಣಗೌಡ ಮಾತನಾಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ತಮ್ಮರಾಜಕೀಯ ಜೀವನದ ಉದ್ದಕ್ಕೂ ಶ್ರಮಿಸಿದ ಕೃಷ್ಣ ಕೃಷ್ಣರಾಜಪೇಟೆ ತಾಲೂಕಿನ ಅಭಿವೃದ್ಧಿಗೆ ಸಮಗ್ರವಾದ ಕಾಣಿಕೆಯನ್ನು ನೀಡಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಾಂತ್ರಿಕ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಕೆ ಆರ್ ಪೇಟೆಗೆ ತಂದಿದ್ದರು.ಆದ್ದರಿಂದ ಇಂಜಿನಿಯರಿಂಗ್ ಕಾಲೇಜಿಗೆ ಕೆ ಆರ್ ಪೇಟೆ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಎಂದು ಸರ್ಕಾರದ ವತಿಯಿಂದ ನಾಮಕರಣ ಮಾಡಿದ್ದಲ್ಲದೆ ಕೃಷ್ಣ ಅವರ ಪುತ್ತಳಿಯನ್ನು ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾಗಿದೆ. ಕೃಷ್ಣ ಅವರಂತೆ ಪ್ರಾಮಾಣಿಕ ಜೀವನ ನಡೆಸುವುದು ಇಂದಿನ ರಾಜಕಾರಣಿಗಳಿಗೆ ಕಷ್ಟಕರವಾಗಿದೆ ಎಂದು ಕೃಷ್ಣ ಅವರ ಪ್ರಾಮಾಣಿಕ ಸೇವೆಯನ್ನು ಸ್ಮರಿಸಿದರು.
ಕೆ ಆರ್ ಪೇಟೆ ಶಾಸಕ ಎಚ್ ಟಿ ಮಂಜು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕೃಷ್ಣ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು.ಎಸ್‌ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಕೆ ಆರ್ ಪೇಟೆ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆ ಹೊಸಳ್ಳಿ ಜವರಾಯಿಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪ್ರತಿಷ್ಠಾನದ ಕಾರ್ಯದರ್ಶಿ ಕತ್ತರಘಟ್ಟ ವಾಸು,ಖಜಾಂಚಿ ಹೆಮ್ಮನಹಳ್ಳಿ ರಮೇಶ್,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್,ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ,ಮಾಜಿ ಅಧ್ಯಕ್ಷರಾದ ಎಂ ಬಿ ಹರೀಶ್,ಚನ್ನಿಂಗೇಗೌಡ,ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್,ಬಿ ನಾಗೇಂದ್ರ ಕುಮಾರ್,ಕೃಷ್ಣ ಅವರ ಧರ್ಮಪತ್ನಿ ಇಂದ್ರಮ್ಮ, ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಮಂದಗೆರೆ ಕೆಆರ್ ಜಯರಾಮ್, ಸಿಂದುಘಟ್ಟಸೋಮಸುಂದರ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಂದಿನಿ ಜಯರಾಮ್, ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊಫೆಸರ್ ಬಿ ಜಯಪ್ರಕಾಶ್ ಗೌಡ,ಪ್ರಗತಿಪರ ಕೃಷಿಕ ಪ್ರಸನ್ನ,ಮಾವಿನಕೆರೆ ರಮೇಶ್,ಉರಗತಜ್ಞ ಸ್ನೇಕ್ ಮುನ್ನ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ,ಸಾವಿರಾರು ಕೃಷ್ಣ ಅವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular