ಮೈಸೂರು : ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಚುನಾವಣೆಯ ಅಂಗವಾಗಿ ಇಂದು ನಿರ್ದೇಶಕ ಸ್ಥಾನಕ್ಕೆ ರಾಜಶೇಖರ್ ಅವರು ಉಪ ಚುನಾವಣಾ ಅಧಿಕಾರಿ ಬಸವರಾಜ್ ಸ್ವಾಮೀ ರವರಿಗೆ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು ಇದೇ ತಿಂಗಳು 21ನೇ ತಾರೀಖಿನಂದು ಚುನಾವಣೆ ನಡೆಯಲಿದೆ .
ಮೈಸೂರು ಜಿಲ್ಲೆಯ ಸಮುದಾಯದ ಬಂಧುಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ, ಎಲ್ಲಿ ಸಂಘಟನೆ ಇದೆ ಅಲ್ಲಿ ಶಕ್ತಿ ಇದೆ ಎಲ್ಲಿ ಶಕ್ತಿ ಇದೆ ಅಲ್ಲಿ ನ್ಯಾಯ ಇದೆ , ಕಾಲ ಕಾಲಕ್ಕೆ ಎಲ್ಲರ ಸಲಹೆ ಸಹಕಾರವನ್ನು ಪಡೆದು ಮತ್ತು ಪೂಜ್ಯರ ಮಾರ್ಗದರ್ಶನ ಪಡೆದು ಪ್ರತಿ ಕ್ಷಣ ಸಮಾಜದ ಏಳಿಗೆಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಈ ವೇಳೆ ಲೋಕೇಶ್ (ಚಿನ್ನ ಬುದ್ದಿ,) ಕುಮಾರ್ ಸಿ,ಪಿ, ಕಾವಿ ಬಸಪ್ಪ , ನಂಜುಂಡ, ಡಿಪಿ ಕೆ ಪರಮೇಶ್, ವಿರುಪಾಕ್ಷಮ್ಮ, ಶಿವಮ್ಮ., ಹರೀಶ್, ಸಂತೋಷ್, , ಸೇರಿದಂತೆ ಹಲವು ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.