ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲೊಂದು ಡೇಂಜರಸ್ ಕಿರುಸೇತುವೆ ಇರೋದು ಬಯಲಾಗಿದೆ. ಬೆಳ್ತಂಗಡಿ-ಮೂಡಬಿದಿರೆ ಸಂಪರ್ಕಿಸುವ ಸೇತುವೆ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಗುರುತಿಸಲ್ಪಟ್ಟಿದೆ.
ಕಳೆದ ಮಳೆಗಾಲದಲ್ಲೇ ಕುಸಿದಿದ್ದ ಸೇತುವೆಗೆ ಕಾಯಕಲ್ಪ ಒದಗಿಸದೆ ನಿರ್ಲಕ್ಷ್ಯ ತೋರಿಸಿದ್ದರಿಂದ ಈ ಸೇತುವೆ ಕುಸಿತಗೊಂಡಿದೆ. ವಿಪರ್ಯಾಸವೆಂದರೆ ತಡೆಗೋಡೆ ಕುಸಿದು ವರ್ಷ ಕಳೆದರೂ ಪಂಚಾಯತ್ ಏನೂ ಕ್ರಮ ಕೈಗೊಂಡಿಲ್ಲ. ಕಳೆದ ಬಾರಿ ಎಚ್ಚರಿಕೆಯ ಬ್ಯಾನರ್ ಆಳವಡಿಸಿ ಪಂಚಾಯತ್ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ.

ಹೀಗಾಗಿ ಈ ಮಳೆಗಾಲದಲ್ಲೂ ಆತಂಕ ಮುಂದುವರೆದಿದ್ದು, ಸೇತುವೆಯಲ್ಲಿ ಬಿರುಕುಗೊಂಡಿದೆ. ದಿನನಿತ್ಯ ಶಾಲಾ ವಾಹನಗಳು ಈ ಸೇತುವೆಯಲ್ಲಿ ಸಂಚರಿಸುತ್ತೆ. ಸದ್ಯ ತಗಡು ಶೀಟ್ ಅಳವಡಿಸಿರುವ ಮರೋಡಿ ಗ್ರಾಮ ಪಂಚಾಯತ್ ಘನ ವಾಹನ ಸಂಚಾರ ನಿಷೇಧ ಎಂದು ಸಣ್ಣ ಬ್ಯಾನರ್ ಆಳವಡಿಸಿ ಕೈ ತೊಳೆದುಕೊಂಡಿದೆ.