Wednesday, April 23, 2025
Google search engine

Homeಸ್ಥಳೀಯನಮ್ಮ ಪಕ್ಷವು ಜನರಿಗೆ ನೀಡಿರುವ ೫ ಗ್ಯಾರಂಟಿ ಭರವಸೆಗಳನ್ನು ಈಡೇರಿಸುತ್ತೇವೆ : ಸಚಿವ ಕೆ.ವೆಂಕಟೇಶ್

ನಮ್ಮ ಪಕ್ಷವು ಜನರಿಗೆ ನೀಡಿರುವ ೫ ಗ್ಯಾರಂಟಿ ಭರವಸೆಗಳನ್ನು ಈಡೇರಿಸುತ್ತೇವೆ : ಸಚಿವ ಕೆ.ವೆಂಕಟೇಶ್


ಚಾಮರಾಜನಗರ : ನಮ್ಮ ಪಕ್ಷವು ಚುನಾವಣೆಯ ಸಂದರ್ಭದಲ್ಲಿ ಜನರಿಗೆ ನೀಡಿರುವ ೫ ಗ್ಯಾರಂಟಿ ಭರವಸೆಗಳನ್ನು ಯಾವುದೇ ಪಕ್ಷವು ಎಷ್ಟೇ ವಿರೋಧ ಮಾಡಿದರೂ ಈಡೇರಿಸುತ್ತೇವೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿರುಗೇಟು ನೀಡಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಇಂದಿನಿಂದ ವಿದ್ಯುತ್, ಅಕ್ಕಿ ಕೊಡುವುದು ಜಾರಿಯಾಗುತ್ತಿದೆ, ನಮ್ಮ ಪಕ್ಷ ಚುನಾವಣೆ ಸಮಯದಲ್ಲಿ ಕೊಟ್ಟ ಐದು ಗ್ಯಾರೆಂಟಿ ಭರವಸೆ ಜಾರಿ ಮಾಡುತ್ತೇವೆ.ಅಕ್ಕಿ ಬದಲು ಹಣ ಕೊಡುವ ವ್ಯವಸ್ಥೆಯನ್ನು ವಿರೋಧ ಮಾಡುವವರು ಇದ್ದೇ ಇರುತ್ತಾರೆ ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ನಮ್ಮ ಉದ್ದೇಶ ನಾವು ಜನರಿಗೆ ಕೊಟ್ಟಿರುವ ಭರವಸೆಯನ್ನ ಆದಷ್ಟು ಬೇಗ ಈಡೇರಿಸುವುದು.ಅಕ್ಕಿ ಸಂಗ್ರಹವಾದ ಮೇಲೆ ಅಕ್ಕಿಯನ್ನು ಕೊಡುತ್ತೇವೆ, ಹಣ ಕೊಡುವುದು ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂದರು.
ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಅಕ್ಕಿ ಸಿಗದ ಕಾರಣ ಹಣ ಕೊಡ್ತಿದ್ದೇವೆ ಅಷ್ಟೇ.ಕೇಂದ್ರ ಸರ್ಕಾರ ಅಕ್ಕಿ ಕೊಡದ ಕಾರಣ ವಿಧಿ ಇಲ್ಲದೆ ಹಣ ಕೊಡ್ತಿದ್ದೇವೆ,೨-೩ ತಿಂಗಳ ಬಳಿಕ ಅಕ್ಕಿ ಕೊಡುತ್ತೇವೆ, ಪ್ರತಿಪಕ್ಷದವರು ಹೇಳಿದಂಗೆ ಕೇಳೋಕ್ ಆಗಲ್ಲ ಎಂದು ಕಿಡಿಕಾರಿದರು.ಬಿಜೆಪಿ ಅವರಿಗೆ ಮಾಡುವುದಕ್ಕೆ ಬೇರೇನು ಕೆಲಸವಿಲ್ಲ ಆದ್ದರಿಂದ ಈ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಐದು ಗ್ಯಾರಂಟಿಗಳನ್ನು ಈ ಸದನ ನಡೆಯುವುದರೊಳಗೆ ಈಡೇರಿಸದಿದ್ದರೆ ಸದನದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಸಚಿವರನ್ನು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಯಾಕಪ್ಪ ಪ್ರೋಟೆಸ್ಟ್ ಮಾಡೋರಿಗೆ ಬೇಡ ಅನ್ನೋಕೆ ಆಗುತ್ತಾ, ಮಾಡಲಿ ಬಿಡಿ ಎಂದು ಯಡಿಯೂರಪ್ಪ ಪ್ರತಿಭಟನೆ ಸಂಬಂಧ ತಿರುಗೇಟು ಕೊಟ್ಟರು.

RELATED ARTICLES
- Advertisment -
Google search engine

Most Popular