Sunday, April 20, 2025
Google search engine

Homeಸ್ಥಳೀಯಅಶೋಕ್,ವಿಜಯೇಂದ್ರ ಸಿದ್ದರಾಮಯ್ಯ ಪತ್ನಿಗೆ ಸುಖಾಸುಮ್ಮನೆ ತೇಜೋವಧೆ : ಎಂ.ಲಕ್ಷ್ಮಣ್

ಅಶೋಕ್,ವಿಜಯೇಂದ್ರ ಸಿದ್ದರಾಮಯ್ಯ ಪತ್ನಿಗೆ ಸುಖಾಸುಮ್ಮನೆ ತೇಜೋವಧೆ : ಎಂ.ಲಕ್ಷ್ಮಣ್

ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿದೆ ಎಂದು ಬಿಜೆಪಿ ನಾಯಕರಾದ ಆರ್ ಅಶೋಕ್ ಹಾಗೂ ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಮ್ಮ ಅವರ ಹೆಸರನ್ನು ಮಾಧ್ಯಮಗಳ ಮುಂದೆ ತಂದು ತೇಜೋವಧೆ ಮಾಡುತ್ತಿದ್ದಾರೆ. ಅವರ ಸುಳ್ಳು ಆರೋಪಗಳಿಗೆ ಸ್ಪಷ್ಟನೆ ನೀಡುತ್ತಿದ್ದೇನೆ.

೨೦೧೭ರಲ್ಲಿ ಪಾರ್ವತಿ ಅವರು ಮುಡಾಗೆ ಪತ್ರ ಬರೆದು ನಮ್ಮ ಗಮನಕ್ಕೆ ಬಾರದೆ ನಮ್ಮ ಜಮೀನನ್ನು ನಿವೇಶನ ಮಾಡಿ ಹಂಚಿಕೆ ಮಾಡಿದ್ದೀರಿ ಎಂದು ದೂರು ದಾಖಲಿಸುತ್ತಾರೆ. ನಂತರ ಅವರು ೨೭ ದೂರು ನೀಡಿದ್ದಾರೆ. ಇವರ ೩ ಎಕರೆ ೧೬ ಗುಂಟೆ ಜಾಗದಲ್ಲಿ ಮುಡಾ ಅವರು ೫೯ ನಿವೇಶನಗಳನ್ನು ಮಾಡಿ ಹಂಚಿದ್ದಾರೆ.

ಕಾನೂನಿನಲ್ಲಿ ಭೂಸ್ವಾಧೀನ ಮಾಡಿದ ಜಾಗದಲ್ಲೇ ಬದಲಿ ಜಾಗ ನೀಡಬೇಕು ಎಂದು ಇದೆ. ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಪ್ರಕಾರ ಬೇರೆ ಜಾಗದಲ್ಲೂ ನಿವೇಶನ ಹಂಚಲು ಅವಕಾಶವಿದೆ. ಅದರ ಪ್ರಕಾರ ಪಾರ್ವತಮ್ಮ ಅವರಿಗೆ ನಿವೇಶನ ನೀಡಿದ್ದಾರೆ. ಪಾರ್ವತಮ್ಮನವರು ಇಂತಹುದೇ ಜಾಗದಲ್ಲಿ ನಿವೇಶನ ಬೇಕು ಎಂದು ಅರ್ಜಿ ಹಾಕಿಲ್ಲ.

ವಿಜಯೇಂದ್ರ ಹಾಗೂ ಅಶೋಕ್ ಅವರಿಗೆ ಮಾನ ಮರ್ಯಾದೆ ಇದ್ದರೆ, ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗ ಮಾಡಿಕೊಂಡು ಈ ನಿವೇಶನ ಕೊಡಿಸಿದ್ದರೆ ಅದಕ್ಕೆ ಪೂರಕವಾಗಿರುವ ದಾಖಲೆಯನ್ನು ಮುಂದಿಟ್ಟು ಮಾತನಾಡಲಿ. ಈ ಮುಡಾ ಕರ್ಮಕಾಂಡ ಬಿಜೆಪಿ ಸರ್ಕಾರದ್ದು. ಅಶೋಕ್ ಅವರೇ ನೀವು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಅನರ್ಹರು. ನೀವು ಹೇಳಿದಂತೆ ೬೦ ನಿವೇಶನ ಎಲ್ಲಿ ಕೊಟ್ಟಿದ್ದಾರೆ.

ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡಲು ಸಿಎಂ ನಿವಾಸ ಮುತ್ತಿಗೆ ಹಾಕುತ್ತಿದ್ದಾರೆ. ವಿಜಯೇಂದ್ರ ಅವರೇ ನಿಮ್ಮ ತಂದೆ ಸಿಎಂ ಆಗಿದ್ದಾಗ ನೀವು ಪರ್ಯಾಯ ಸರ್ಕಾರ ನಡೆಸುತ್ತಿದ್ದಿರಿ. ಸಂಪುಟದಲ್ಲಿ ೩೪ ಸಚಿವರೂ ನಿಮ್ಮವರನ್ನೇ ಇಟ್ಟುಕೊಂಡು ಗೋಲ್ಡ್ ಫಿಂಚ್ ಹೊಟೇಲ್ ನಲ್ಲಿ ಸರ್ಕಾರ ನಡೆಸುತ್ತಿದ್ದವರು ನೀವು. ಮಾರಿಷಿಯಸ್ ನ ಬ್ಯಾಂಕ್ ಗಳಲ್ಲಿರುವ ಖಾತೆಗಳಲ್ಲಿ ಎಷ್ಟೆಷ್ಟು ಹಣ ಇದೆ ಎಂದು ಹೇಳಿ. ಗಾಜಿನ ಮನೆಯಲ್ಲಿ ಕೂತು ಸಿದ್ದರಾಮಯ್ಯ ಹಾಗೂ ಅವರ ಧರ್ಮಪತ್ನಿ ಬಗ್ಗೆ ಮಾತನಾಡುತ್ತೀರಾ?

ಇನ್ನು ಮೈಸೂರು ಉಪಆಯುಕ್ತರು ೧೬ ಪತ್ರ ಬರೆದಿದ್ದರೂ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಅವರು ಯಾರ ವಿರುದ್ಧ ಪತ್ರ ಬರೆದಿದ್ದರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ೨೦೨೦, ೨೦೨೧, ೨೦೨೨ರಲ್ಲಿ ಆಗಿರುವ ಅಕ್ರಮದ ಬಗ್ಗೆ ತನಿಖೆ ಮಾಡುವಂತೆ ಪತ್ರ ಬರೆದಿದ್ದಾರೆ. ಅವರ ಪತ್ರದಲ್ಲಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಆರೋಪ ಮಾಡಿದ್ದರು. ಈ ಪತ್ರದ ಆಧಾರದ ಮೇಲೆ ಸಿದ್ದರಾಮಯ್ಯ ಅವರು ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದ ಸಮಿತಿ ಮಾಡಿ ತನಿಖೆ ನಡೆಸಲಾಗುತ್ತಿದೆ.

ಮುಂಬರುವ ಅಧಿವೇಶನದಲ್ಲಿ ನೀವು ಈ ವಿಚಾರವಾಗಿ ಮಾತನಾಡಿ. ಸಿದ್ದರಾಮಯ್ಯನವರು ಕೇವಲ ಒಂದೇ ಒಂದು ಸಾಲಿನಲ್ಲಿ ಉತ್ತರ ನೀಡುತ್ತಾರೆ. ಬಿಜೆಪಿ ಕಾರ್ಯಕರ್ತನೇ ಅಶೋಕ್ ಅವರು ೨೦೧೦ರಲ್ಲಿ ನನ್ನನ್ನು ಮೇಯರ್ ಮಾಡುವುದಾಗಿ ಹೇಳಿ ೧೦ ಕೋಟಿ ಹಣ ಪಡೆದಿದ್ದರು. ಆದರೆ ಹಣವೂ ವಾಪಸ್ ನೀಡಲಿಲ್ಲ, ಮೇಯರ್ ಸ್ಥಾನವನ್ನು ನೀಡಲಿಲ್ಲ ಎಂದು ಹೇಳಿಕೆ ನೀಡಿರುವ ದಾಖಲೆ ನಮ್ಮ ಬಳಿ ಇವೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular