ಮಂಡ್ಯ: ಕೊಲೆ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ. ದರ್ಶನ್ ಪ್ರಕರಣದಲ್ಲಿ ಆರೋಪಿ ಅಷ್ಟೆ ಇನ್ನು ಯಾವುದು ಸಾಬೀತಾಗಿಲ್ಲ ಅಥವಾ ಶಿಕ್ಷೆಯಾಗಿಲ್ಲ. ದರ್ಶನ್ ನಿರಾಪರಾಧಿ ಎಂದು ಸಾಬೀತುಪಡಿಸಿ ಹೊರ ಬರುತ್ತಾರೆ ಎಂದು ಇದೇ ಮೊದಲ ಬಾರಿಗೆ ನಟ ದರ್ಶನ್ ಪರ ಸಂಸದೆ ಸುಮಲತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಸುಮಲತಾ, ಕೊನೆಗೂ ಮೌನ ಮುರಿದಿದ್ದಾರೆ.
ಫೇಸ್ ಬುಕ್ ನಲ್ಲಿ ಘಟನೆ ಬಗ್ಗೆ ಸುದೀರ್ಘವಾಗಿ ಸುಮಲತಾ ಅಂಬರೀಶ್ ಮಾಹಿತಿ ಹಂಚಿಕೊಂಡಿದ್ದು, ರೇಣುಕಾಸ್ವಾಮಿ ಕೊಲೆಗೆ ಸಂತಾಪ ಸೂಚಿಸಿದ್ದು, ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ, ಅವರಿಗೆ ನ್ಯಾಯ ಸಿಗಲಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.
ಘಟನೆ ನನ್ನ ಹೃದಯವನ್ನ ಛಿದ್ರಗೊಳಿಸಿದೆ,ಬಹಳ ದಿನ ಆಘಾತ ಹಾಗೂ ನೋವು ತಂದಿದೆ ಎಂದಿದ್ದಾರೆ.
ಸುಮಲತಾ ಹಾಗೂ ದರ್ಶನ್ ಸಂಬಂಧದ ಬಗ್ಗೆ ಕೂಡ ಫೋಸ್ಟ್ ಹಾಕಿದ್ದು, ದರ್ಶನ್ ಸ್ಟಾರ್ ಆಗುವುದಕ್ಕೂ ಮೊದಲು ಪರಿಚಯ. ಸ್ಟಾರ್ ಗಿಂತ ನನ್ನ ಕುಟುಂಬದ ಸದಸ್ಯ, ಯಾವಗಲೂ ನನಗೆ ಮಗನಂತೆ. ನನಗೆ ತಾಯಿಯ ಗೌರವ ಮತ್ತು ಸ್ಥಾನ ಹಾಗೂ ಮಗನ ಪ್ರೀತಿ ನೀಡಿದ್ದಾರೆ. ಯಾವ ತಾಯಿಯೂ ಈ ಪರಿಸ್ಥಿತಿಯಲ್ಲಿ ಮಗುವನ್ನು ನೋಡಲು ಸಹಿಸುವುದಿಲ್ಲ. ಈ ಕೃತ್ಯವನ್ನು ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ ಎಂದು ನಾನು ನಂಬಿದ್ದೇನೆ. ಪ್ರಕರಣ ಕೋರ್ಟ್ ನಲ್ಲಿ ಇರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಮುಗ್ಧ ಮಗನನ್ನು ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗಿಸಿಕೊಂಡಿರುವುದು ತುಂಬಾ ಅನ್ಯಾಯವಾಗಿದೆ. ತಮ್ಮ ಕಾಮೆಂಟ್ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಪರಿಗಣಿಸಿದ್ದೇನೆ. ದರ್ಶನ್ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇನ್ನು ಯಾವುದು ಸಾಬೀತಾಗಿಲ್ಲ ಅಥವಾ ಶಿಕ್ಷೆಯಾಗಿಲ್ಲ. ಈ ಪರಿಸ್ಥಿತಿಯಲ್ಲಿ ನಾನು ನೆಮ್ಮದಿಯಿಂದ ಸಮಸ್ಯೆಯಿಂದ ದೂರವಿರುವುದು ಅಸಾಧ್ಯ. ಇದು ನನ್ನದೇ ಕೌಟುಂಬಿಕ ಸಮಸ್ಯೆ. ಚಿತ್ರರಂಗ ಅಸ್ತವ್ಯಸ್ತವಾಗಿದೆ. ದರ್ಶನ್ ತಾವು ನಿರಾಪರಾಧಿ ಎಂದು ಸಾಬೀತುಪಡಿಸಿ ಹೊರ ಬರುತ್ತಾರೆ. ಚಿತ್ರೀಕರಣ ಸಾಮನ್ಯ ಜೀವನವನ್ನು ಪುನಾರಾರಂಬಿಸುತ್ತಾರೆ ಎಂದು ನಾನು ಭರವಸೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ದಯವಿಟ್ಟು ಶಾಂತವಾಗಿರಿ. ಮತ್ತು ಈ ಕ್ಷಣದಲ್ಲಿ ಹೇಳಿಕೆಗಳನ್ನ ನೀಡಬೇಡಿ. ನಮಲ್ಲಿ ಕಾನೂನಿಗಿಂತ ಯಾರು ಮೇಲಲ್ಲ ನಾವು ಅದನ್ನ ಗೌರವಿಸಬೇಕು. ಒಳ್ಳೆಯ ಸಮಯ ಮರಳಲು ಪ್ರಾರ್ಥಿಸಬೇಕು. ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಇರಲಿ, ದೇವರಲ್ಲಿನಂಬಿಕೆ ಇರಲಿ. ಎಲ್ಲವೂ ಸರಿಯಾಗುತ್ತವೆ ಎಂದು ದರ್ಶನ್ ಅಭಿಮಾನಿಗಳಿಗೂ ಮನವಿ ಮಾಡಿರುವ ಸುಮಲತಾ ಸತ್ಯಮೇವ ಜಯತೆ ಎಂದಿದ್ದಾರೆ.