ಮಂಡ್ಯ: ಕಾಂಗ್ರೆಸ್ ನ ಯಾವ ಕಾರ್ಯಕ್ರಮ ನಿಲ್ಲಿಸಿಲ್ಲ, ವಿರೋಧ ಪಕ್ಷ ಇಲ್ಲಸಲ್ಲದ ಆರೋಪ ಮಾಡ್ತಿದೆ ಎಂದು ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಮಾತನಾಡಿದ ಅವರು, ರೈತರ ಸಭೆ ಕಾರಣ ತಡವಾಗಿದೆ ಎಂದು ಮೊದಲಿಗೆ ಜನರಲ್ಲಿ ಕ್ಷಮೆಯಾಚಿಸಿದರು.
ನಮ್ಮ ಸರ್ಕಾರ ಬಂದ ಮೇಲೆ ಅಭಿವೃದ್ಧಿಯಾಗಿದೆ. ಐದು ಗ್ಯಾರಂಟಿ ಕೊಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಐದು ಗ್ಯಾರಂಟಿ ಪ್ರತಿ ಮನೆ ಮನೆಗೆ ತಲುಪುತ್ತಿದೆ. ಪ್ರತಿ ಕುಟುಂಬಕ್ಕೆ 5 ಸಾವಿರ ಕೊಡುತ್ತಿದೆ ಎಂದರು.
ಮುಂಗಾರು ಬೆಳೆಗೆ ಕೊರತೆ ಇಲ್ಲದ ರೀತಿ ವಿತರಣೆ ಮಾಡಲಾಗುತ್ತಿದೆ. ಕೆಲಸ ಮಾಡುವವರನ್ನ ಕಂಡರೆ ನೂರು ತಪ್ಪು ಹುಡುಕುತ್ತಾರೆ. ನಾಲೆಗೆ ನೀರು ಬಿಡಲು ಇಂದು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ನಾವು ಜನರ ಪರ ಅಭಿವೃದ್ಧಿ ಪರ ಇರುವವರು ಎಂದು ಹೇಳಿದರು.
ಮಂಡ್ಯ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆ ಹಿಂದಿನ ಮಹಾಭಾವರು ಯಾಕೆ ಕೃಷಿ ವಿವಿ ಜಾರಿ ಮಾಡಿಲ್ಲ.? ಜಿಲ್ಲೆಯಲ್ಲಿ ಸಾರ್ವಜನಿಕ ಸಮಸ್ಯೆ ಇವೆ. ಜೂನ್ 1 ರಂದು 10, 600 ಕೇಸ್ ತಹಶಿಲ್ದಾರ್ ಬಳಿ ಇವೆ. ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕರ 10,000 ಕೇಸ್ ಬಗೆಹರಿಸಲಾಗಿದೆ. ಯಾವ ಪಕ್ಷ ಅಂತ ನೋಡದೆ ಸಮಸ್ಯೆ ಬಗೆಹರಿಸಿದ್ದೇವೆ ಎಂದು ತಿಳಿಸಿದರು.
ನಾವು ಎಲ್ಲಿಗೆ ಹೋದರು ಮಂಡ್ಯ ಮಾತ್ರ ನೆನಪು ಇರುತ್ತೆ. ಎಲ್ಲಿದ್ದರು ಸಮಸ್ಯೆ ಬಗೆಹರಿಸುವ ಕೆಲಸ ಮಾಡ್ತೇವೆ. ಜಿಲ್ಲೆಯಲ್ಲಿ 27 ಸಾವಿರ ಇ ಸ್ವತ್ತು ವಿಲೇವಾರಿಯಾಗಿದೆ. ಕೋರ್ಟ್ ಗೆ ಹೋಗದ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇವೆ. ಮುಂದೆಯೂ ಅಭಿವೃದ್ಧಿ ಗೆ ಜಿಲ್ಲೆಯಲ್ಲಿ ವಿಶೇಷವಾಗಿ ಗಮನ ಹರಿಸಲಾಗಿದೆ ಎಂದರು.
ಮಂಡ್ಯ ಕೇಂದ್ರ ಸ್ಥಾನದಲ್ಲಿ ಗಣಿಗ ರವಿಕುಮಾರ್ ಆಸಕ್ತಿಯಿಂದ ಸೇವೆ ಮಾಡ್ತಿದ್ದಾರೆ. ಕ್ಷೇತ್ರದಲ್ಲಿ ಬದಲಾವಣೆ ತರಲು ಶ್ರಮ ಪಡುತ್ತಿದ್ದಾರೆ. ಒಂದು ತಿಂಗಳಲ್ಲಿ ನಿಮ್ಮ ಅರ್ಜಿ ಸಮಸ್ಯೆ ಬಗೆಹರಿಸುವ ಕೆಲಸ ಆಗುತ್ತೆ. ನಿಮ್ಮ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮ ವಹಿಸುತ್ತಾರೆ ಎಂದು ಹೇಳಿದರು.