ಬೆಂಗಳೂರು: ಡೆಂಗ್ಯೂಗೆ ನಿಖರವಾದ ಚಿಕಿತ್ಸೆ ಇಲ್ಲ. ಇದರ ಜೊತೆಗೆ ಇತರ ಕಾಯಿಲೆಗಳು ಬರುತ್ತವೆ. ಕೋವಿಡ್ ಅನ್ನು ಪ್ಯಾಂಡಮಿಕ್ ಕಾಯಿಲೆ ಎಂದೆವು. ಇದು ಎಂಡಮೆಕ್ ಕಾಯಿಲೆ. ಕೋವಿಡ್ ಮಾದರಿಯಲ್ಲಿ ಇದಕ್ಕೆ ಚಿಕಿತ್ಸೆ ನೀಡಬೇಕು. ಮೆಡಿಕಲ್ ಎಮರ್ಜೆನ್ಸಿ ಅಂತಾ ಘೋಷಣೆ ಮಾಡಬೇಕು ಎಂದು ಬಿಜೆಪಿ ಕಚೇರಿಯಲ್ಲಿ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಗೌಡ ಜೊತೆ ಜಂಟಿ ಸುದ್ದಿಗೋಷ್ಟಿ ನಡೆಸಿ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಮಂಜುನಾಥ್ ಹೇಳಿದ್ದಾರೆ.
ಡೆಂಗ್ಯೂ ಗಂಭೀರ ಹಂತಕ್ಕೆ ತಲುಪಿದಾಗ ಅದಕ್ಕೆ ಚಿಕಿತ್ಸೆ ಇಲ್ಲ. ಹೀಗಾಗಿ ಏನೇನೋ ಫ್ರೀ ಕೊಡುವ ಬದಲು ಸ್ಲಂ, ವಠಾರಗಳಲ್ಲಿ ವಾಸ ಮಾಡುವವರಿಗೆ ಸೊಳ್ಳೆ ಪರದೆಗಳನ್ನು ಉಚಿತವಾಗಿ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಮಂಜುನಾಥ್ ಹೇಳಿದ್ದಾರೆ.
ರೋಗ ಪತ್ತೆಗೆ ಹೆಚ್ಚು ದರ ತೆಗೆದುಕೊಳ್ಳುವ ಲ್ಯಾಬ್ ಗಳ ಬಾಗಿಲು ಮುಚ್ಚಿಸಬೇಕು. ಸೊಳ್ಳೆ ನಿಯಂತ್ರಣ ಮಾಡಬೇಕು. ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಕೆಲಸ ಮಾಡಬೇಕು. ಇದನ್ನು ನಿಯಂತ್ರಣ ಮಾಡಲು ಟಾಸ್ಕ್ ಫೋರ್ಸ್ ಮಾಡಬೇಕು. ಬೇಸಿಗೆ ಕಾಲದಲ್ಲೇ ನಾವು ಮಳೆಗಾಲದ ಸಮಸ್ಯೆಗಳಿಗೆ ಪರಿಹಾರ ಮಾಡಬೇಕು. ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಏನೇನೋ ಫ್ರೀ ಕೊಡ್ತೀವಿ. ಆದರ ಬದಲಾಗಿ ಸ್ಲಂಗಳಲ್ಲಿ, ವಠಾರಗಳಲ್ಲಿ ವಾಸ ಮಾಡುವವರಿಗೆ ಸೊಳ್ಳೆ ಪರದೆ ಉಚಿತವಾಗಿ ಕೊಡಬೇಕು. ಇದು ನಿಮಗೆ ಹಾಸ್ಯ ಅನಿಸಬಹುದು, ಆದರೆ ಇದು ಸತ್ಯ. ಕೋವಿಡ್ ಸಂಧರ್ಭದಲ್ಲಿ ಉಚಿತ ಚಿಕಿತ್ಸೆ ಕೊಟ್ಟೆವು. ಡೆಂಗ್ಯೂ ಫೀವರ್ ಗಳಿಗೆ ದಾಖಲಾದ ರೋಗಿಗಳಿಗೂ ಉಚಿತ ಚಿಕಿತ್ಸೆ ಕೊಡಬೇಕು. ಖಾಸಗಿ ಆಸ್ಪತ್ರೆ ಗಳಲ್ಲಿ ದಾಖಲಾದ ರೋಗಿಗಳಿಗೂ ಸರ್ಕಾರ ದರ ನಿಗದಿ ಮಾಡಿ, ಸರ್ಕಾರವೇ ಭರಿಸಬೇಕು ಎಂದರು. ವಾರ್ ರೂಂ ಆಥವಾ ಕಂಟ್ರೋಲ್ ರೂಂ ಆಗಲಿ ಇದಕ್ಕೆ ಮಾಡಬೇಕು. ಮಾನಿಟರ್ ಮಾಡಬೇಕು. ಡೆಂಗ್ಯೂ ಹರಡುವಿಕೆ ಪತ್ತೆ ಹಚ್ಚುವ ಕೆಲಸ ಆಗಬೇಕು ಎಂದರು.