Sunday, April 20, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ: ಮೈಮುಲ್ ನ ನಿರ್ದೇಶಕ ಸ್ಥಾನಕ್ಕೆ ನಾಮ ನಿರ್ದೇಶನಗೊಂಡ ಮಲ್ಲಿಕಾರವಿಕುಮಾರ್ ರವರಿಗೆ ಸನ್ಮಾನ

ಕೆ.ಆರ್.ನಗರ: ಮೈಮುಲ್ ನ ನಿರ್ದೇಶಕ ಸ್ಥಾನಕ್ಕೆ ನಾಮ ನಿರ್ದೇಶನಗೊಂಡ ಮಲ್ಲಿಕಾರವಿಕುಮಾರ್ ರವರಿಗೆ ಸನ್ಮಾನ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಮೈಮುಲ್ ನ ನಿರ್ದೇಶಕ ಸ್ಥಾನಕ್ಕೆ ನಾಮ ನಿರ್ದೇಶನಗೊಂಡ ಕೆ .ಆರ್. ನಗರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಮಲ್ಲಿಕಾರವಿಕುಮಾರ್ ಅವರನ್ನು ಕೆ ಆರ್.ನಗರ ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಸಮಾಜದ ಪ್ರಮುಖರ ಪರವಾಗಿ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ಅಭಿನಂದನೆ‌ ಸಲ್ಲಿಸಿ ಮಾತನಾಡಿದ ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಶೇಖರ್, ಸರಳ ಮತ್ತು ಸಜ್ಜನ ರಾಜಕಾರಣಿ ಮಲ್ಲಿಕಾ ರವಿಕುಮಾರ್ ಅವರಿಗೆ ಈ ಹುದ್ದೆ ಲಭಿಸಿರುವುದು ಅತ್ಯಂತ ಸಂತಸದ ತಂದಿದೆ.

ಈ ಹುದ್ದೆಯ ಮೂಲಕ ಗ್ರಾಮೀಣ ಪ್ರದೇಶದ ಹೈನುಗಾರಿಕೆಗೆ ಒಕ್ಕೂಟದ ವತಿಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಕೊಡಿಸುವ ಕೆಲಸ ಮಾಡಿ ಗ್ರಾಮೀಣ ಭಾಗದ ರೈತರ ನೆರವಿಗೆ ಧಾವಿಸಲಿ ಎಂದರು. ಮಲ್ಲಿಕಾ ರವಿಕುಮಾರ್ ಅವರು ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ವೇಳೆ ಎಲ್ಲಾ ಅಧಿಕಾರಿಗಳು ಮತ್ತು ಇತರ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅತ್ಯುತ್ತಮವಾಗಿ ಪಕ್ಷಾತೀತವಾಗಿ ಕೆಲಸ ನಿರ್ವಹಿಸಿದ್ದರು.ಇವರು ಈ ಹುದ್ದೆಯಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಲ್‌.ಪಿ. ರವಿಕುಮಾರ್, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷರುಗಳಾದ ಅರುಣ್ ಬಿ. ನರಗುಂದ, ಎಸ್ ವಿ ಪ್ರಕಾಶ್, ಹಾಡ್ಯ ಜಗದೀಶ್, ಅಪರ ಸರ್ಕಾರಿ ವಕೀಲ ಕೊಡಿಯಲ ಮಹೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷರಾದ ಹೇಮೇಶ್, ಗೌರವ ಸಲಹೆಗಾರರಾದ ಸೋಮಶೇಖರ್, ಸುರೇಶ್ ಸಂಘದ ಪದಾಧಿಕಾರಿಗಳಾದ ಗಂಗಾಧರ್, ಸುರೇಶ್ ಪತ್ರಕರ್ತ‌ ಕರ್ಪೂರವಳ್ಳಿ ಮಹದೇವ್, ಮುಖಂಡರುಗಳಾದ ಸಾಲಿಗ್ರಾಮ ಪ್ರವೀಣ್, ಗಿರೀಶ್, ಚಂದ್ರಪ್ಪ, ಸಿ.ಆರ್‌.ಪಿ. ಗಳಾದ ಸಿ.ಎನ್. ಪ್ರಭು ರಾಜಶೇಖರ್, ಶಿವಕುಮಾರ್ ಶಿಕ್ಷಕರುಗಳಾದ ಬಿ.ಎಲ್.ದಿನೇಶ್, ಪುಟ್ಟರಾಜು, ಮಂಜು, ಗಿರೀಶ್, ನಟರಾಜು, ಬಸಪ್ಪ, ಉಮೇಶ್, ಮಹದೇವಪ್ಪ , ಅರುಣ್, ಆನಂದ್,ಗ್ರಾಮದ ಮುಖಂಡರು ಇದ್ದರು.

RELATED ARTICLES
- Advertisment -
Google search engine

Most Popular