ಮದ್ದೂರು: ನಿಂತಿದ್ದ ಲಾರಿಯ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪತ್ರಕರ್ತ ಸಾವನ್ನಪ್ಪಿರುವ ಘಟನೆ ಮಂಡ್ಯದ ಮದ್ದೂರು ಟಿ.ಬಿ ವೃತ್ತದಲ್ಲಿ ನಿನ್ನೆ ಸುಮಾರು 10 ಗಂಟೆಯಲ್ಲಿ ಸಮಯದಲ್ಲಿ ಜರುಗಿದೆ.
ಬಿ.ಎ.ಮಧುಕುಮಾರ್(34) ಮೃತಪಟ್ಟವರು. ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯ ವಾಸವಿದ್ದ ಮೃತ ಮಧುಕುಮಾರ್. ಪ್ರತಿನಿಧಿ ಪ್ರಾದೇಶಿಕ ದಿನಪತ್ರಿಕೆ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ಮದ್ದೂರು ಟಿಬಿ ವೃತ್ತದ ಬಳಿ ನಿಂತಿದ್ದ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮದ್ದೂರು ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ರಕ್ತಸ್ರಾವವಾದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ಕುರಿತು ಮದ್ದೂರು ಸಂಚಾರಿ ಪೊಲೀಸರ ಪರಿಶೀಲನೆ ನಡೆಸಿದ್ದಾರೆ .ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.