ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ತಿಂಗಳಿಂದ ಮುನ್ನೆಲೆಗೆ ಬಂದಿರುವ ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೧೭ ಜನರು ಜೈಲು ಸೇರಿದ್ದಾರೆ. ಈ ಪೈಕಿ ದರ್ಶನ್ ಗ್ಯಾಂಗ್‌ನ ಸಹಚರ ನಿಖಿಲ್ ನಾಯಕ್ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಕುರಿತು ಇಂದು ಮಧ್ಯಾಹ್ನ ೩ ಗಂಟೆಗೆ ಇಂದು ಸೋಮವಾರ ಕೋರ್ಟ್‌ನಲ್ಲಿ ವಿಚಾರಣೆಯಿತ್ತು. ಆದರೆ, ಜಾಮೀನು ಅರ್ಜಿ ವಿಚಾರಣೆಗೂ ಮುನ್ನವೇ ಆರೋಪಿ ನಿಖಿಲ್ ನಾಯಕ್ ಪರ ವಕೀಲರು ಜಾಮೀನಿ ಅರ್ಜಿ ವಾಪಸ್ ಪಡೆದುಕೊಂಡಿದ್ದಾರೆ.
ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವಿಚಾರಣೆಗೆ ಮುನ್ನವೇ ಜಾಮೀನು ಅರ್ಜಿಯನ್ನು ಆರೋಪಿ ಪರ ವಕೀಲರು ವಾಪಸ್ಸು ಪಡೆದಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಿನ ಎ೧೭ ಆರೋಪಿ ನಿಖಿಲ್ ನಾಯಕ್ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿಲ್ಲ. ಆತ ಅಭಿಮಾನ ಹಾಗೂ ಇತರೆ ಕಾರಣಕ್ಕೆ ಕಟ್ಟುಬಿದ್ದು, ಶವ ಬೀಸಾಡಲು ಮುಂದಾಗಿದ್ದನು. ಆದ್ದರಿಂದ ನಿಖಿಲ್‌ಗೆ ಜಾಮೀನು ಮಂಜೂರು ಮಾಡಬೇಕು ಎಂದು ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದರು. ಶನಿವಾರ ಈ ಅರ್ಜಿ ವಿಚಾರಣೆ ಮಾಡಿದ್ದ ನ್ಯಾಯಾಲಯದ ಮುಂದೆ ಆರೋಪಿ ಪರ ವಕೀಲರು ವಾದ ಮಂಡಿಸಲು ಮತ್ತಷ್ಟು ದಿನ ಕಾಲಾವಕಾಶ ನೀಡುವಂತೆ ಕೇಳಿದ್ದರು.