Sunday, April 20, 2025
Google search engine

Homeರಾಜ್ಯಕಾಡಾನೆಗಳ ದಾಳಿ:  15 ಲಕ್ಷ ರೂ ಬೆಲೆಬಾಳುವ ತೇಗದ ಮರಗಳು ನಾಶ

ಕಾಡಾನೆಗಳ ದಾಳಿ:  15 ಲಕ್ಷ ರೂ ಬೆಲೆಬಾಳುವ ತೇಗದ ಮರಗಳು ನಾಶ

ಮಂಡ್ಯ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಹೆಚ್.ಬಸಾಪುರಕ್ಕೆ ಕಾಡಾನೆಗಳ ಹಿಂಡು ಲಗ್ಗೆ ಇಟ್ಟಿದ್ದು, ಕಾಡಾನೆಗಳ ದಾಳಿಗೆ ತೇಗದ  ಮರಗಳು ನಾಶವಾಗಿವೆ.

ತಡರಾತ್ರಿ 5 ಕಾಡಾನೆಗಳು ಗ್ರಾಮದ ಆನಂದ್ ಎಂಬುವರ ಜಮೀನಿನ ಮೇಲೆದಾಳಿ ಮಾಡಿದ್ದು, 15 ಲಕ್ಷ ರೂ ಬೆಲೆಬಾಳುವ ತೇಗದ ಮರಗಳನ್ನು ನಾಶಪಡಿವೆ.

ಕಾಡಾನೆಗಳ ದಾಳಿಗೆ ರೈತ ಕಂಗಲಾಗಿದ್ದಾನೆ.

ಈ ವೇಳೆ ಮಾತನಾಡಿದ ಜಮೀನಿನ ಮಾಲೀಕ ಆನಂದ್, ನಮ್ಮ ಜಮೀನಿಗೆ ಪದೇ ಪದೇ ಕಾಡಾನೆಗಳು ಲಗ್ಗೆ ಇಡುತ್ತಿವೆ. ಬಂದು ಸುಮಾರು 15 ಲಕ್ಷ ರೂ ಬೆಲೆ ಬಾಳುವ ಮರಗಳನ್ನು ಮುರಿದು ಹಾಕಿದ್ದು, ಬಸವನ ಬೆಟ್ಟದ ರಸ್ತೆಯಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಗೇಟ್ ಇದ್ದು ಗೇಟ್ ಅನ್ನು ಹಾಕುತ್ತಿಲ್ಲ.  ಅರಣ್ಯ ಇಲಾಖೆಯವರು ನಿರ್ಲಕ್ಷ್ಯದಿಂದ ಗ್ರಾಮದ ಸೂಕ್ತ ಮುತ್ತಲಿನ ಜಮೀನುಗಳಿಗೆ ಆನೆಗಳು ದಾಳಿ ಮಾಡುತ್ತಿವೆ. ಸರ್ಕಾರ ಇತ್ತ ಗಮನಿಸಿ ಸೂಕ್ತ ಪರಿಹಾರ ಕೊಡುವಂತೆ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular