ಶಿರಸಿ: ಗದ್ದೆ ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ಹೊಳೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.
ಖುರ್ಸೆ ಗ್ರಾಮದ ರಾಮಚಂದ್ರ ಈರಾ ಚಲವಾದಿ (42) ಶವವಾಗಿ ಪತ್ತೆಯಾದ ವ್ಯಕ್ತಿ. ಜು.6ರಂದು ತಮ್ಮ ಗದ್ದೆ ಕೆಲಸಕ್ಕೆ ಹೊದವರು ನಾಪತ್ತೆ ಆಗಿದ್ದರು. ಅವರನ್ನು ಹುಡುಕಾಟ ಮಾಡಿದ ಬಳಿಕ ಜು.೮ರಂದು ಮಧ್ಯಾಹ್ನ ಖುರ್ಸೆ ಗ್ರಾಮದ ಕಲ್ಲೋಳೆ ಹಳ್ಳದಲ್ಲಿ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಪೊಲೀಸರು ತನಿಖೆ ಆರಂಭಿಸಿದ್ದಾರೆ.