ಬೆಂಗಳೂರು : ಅಸಹಜ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ ಎಲ್ ಸಿ ಸೂರಜ್ ರೇವಣ್ಣ ಈಗಾಗಲೇ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಅವರು ತಮ್ಮ ೨ನೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು, ವಿಚಾರಣೆ ನಡೆಸಿದ ಕೋರ್ಟ್ ಜುಲೈ ೧೦ಕ್ಕೆ ವಿಚಾರಣೆ ಮುಂದೂಡಿದೆ.
ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅವರು ಎರಡನೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಸಿಐಡಿ ತನಿಖಾಧಿಕಾರಿ ಎಂ ಹೆಚ್ ಉಮೇಶ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಸೂರಜ್ ರೇವಣ್ಣ ವಿರುದ್ಧ ೨ನೇ ಪ್ರಕರಣದಲ್ಲೂ ಕೂಡ ಸಿಐಡಿ ಪೋಲೀಸರು ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮಧ್ಯಂತರ ಜಾಮಿನು ನೀಡುವಂತೆ ಸೂರಜ್ ಪರ ವಕೀಲರು ಮನವಿ ಮಾಡಿದ್ದಾರೆ. ಈ ವೇಳೆ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನು ಕೋರಿದರು.
ಇದೆ ಸಂದರ್ಭದಲ್ಲಿ ನ್ಯಾಯಾಲಯವು ಆಕ್ಷೇಪಣಿ ಸಲ್ಲಿಸುವವರೆಗೂ ಎರಡನೇ ಕೇಸ್ನಲ್ಲಿ ಬಲವಂತದ ಕ್ರಮವಿಲ್ಲ ಎಂದು ಹೇಳಿ ನ್ಯಾಯಾಲಯಕ್ಕೆ ಸರ್ಕಾರಿ ಅಭಿಯೋಜಕರಿಂದ ಮೆಮೊ ಸಲ್ಲಿಕೆ ಮಾಡಲಾಯಿತು. ನಂತರ ವಿಚಾರಣೆಯನ್ನು ಜುಲೈ ೧೦ ಕ್ಕೆ ಮುಂದೂಡಿತು.