ರಾಮನಗರ: ತಂಬಾಕು ಉತ್ಪನ್ನಗಳ ಸೇವನೆಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಪ್ರಚಾರ ಮಾಡುವುದರೊಂದಿಗೆ, ಪರಿಸರದಲ್ಲಿ ತಂಬಾಕಿಂದಾಗುವ ದುಷ್ಪರಿಣಾಮಗಳ ತಡೆಗೆ ರಚಿತವಾಗಿರುವ ಕಾನೂನಾತ್ಮಕ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರುಜು.೮ರ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಅಪರ ಜಿಲ್ಲಾಧಿಕಾರಿ ಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾತಂಬಾಕು ನಿಯಂತ್ರಣ ಕೋಶದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೀಡಿಅಥವಾ ಸಿಗರೇಟು ಸೇದುವವರಿಗಿಂತ ಲೂಅವರ ಸುತ್ತಮುತ್ತಲಿರುವ ಅಥವಾ ಆ ಪರಿಸರದಲ್ಲಿರುವ ಸಾರ್ವಜನಿಕರಆರೋಗ್ಯದ ಮೇಲೆ ವ್ಯಾಪಕವಾಗಿದುಷ್ಪರಿಣಾಮ ಬೀರುತ್ತದೆ, ಅಷ್ಟೇ ಅಲ್ಲದೇಅವರುಕ್ಯಾನರ್‌ಗೆ ಬಲಿಯಾಗುವ ಸಾಧ್ಯತೆಗಳೂ ಇರುತ್ತವೆ, ಆದಕಾರಣ ಧೂಮಪಾನಿಗಳೂ ಸೇರಿದಂತೆನಿಷ್ಕ್ರೀಯ ಧೂಮಪಾನಿಗಳಿಗೆ (ಪಾಸ್ಸೀವ್ ಸ್ಮೋಕರ್‍ಸ್) ಯಾವುದೇರೀತಿಯ ದುಷ್ಪರಿಣಾಮ ಬೀರದಂತೆ ತಂಬಾಕಿನ ಕೆಡಕುಗಳ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಬೇಕು, ಅದು ನಮ್ಮಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆಎಂದಅವರು ಶಾಲಾ-ಕಾಲೇಜುಆವರಣ, ಸಾರ್ವಜನಿಕ ಸ್ಥಳ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಹಾಗೂ ಬಸ್‌ಗಳಲ್ಲಿ ಈ ಬಗ್ಗೆ ಕಟ್ಟೆಚ್ಚರ ವಹಿಸಬೇಕು ಎಂದರು.
ಬಸ್‌ಗಳಲ್ಲಿ ಬೀಡಿ ಸಿಗರೇಟ್ ಸೇವನೆ ಕಂಡುಬಂದರೆಆಯಾ ಬಸ್ ಕಂಡಕ್ಟರ್‌ಗಳನ್ನೇ ನೇರಹೊಣೆ ಮಾಡಿ ಕ್ರಮಕೈಗೊಳ್ಳುವ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸುತ್ತೋಲೆ ಹೊರಡಿಸಬೇಕು.ದೇವಸ್ಥಾನದಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಬಾಕು ಸೇವೆನೆಯ ಹಾನಿಕಾರಕರಗಳ ಬಗ್ಗೆ ಬ್ಯಾನರ್‌ಅಳವಡಿಸಬೇಕು ಹಾಗೂ ಕರಪತ್ರಗಳನ್ನು ವಿತರಿಸಬೇಕು. ಶಾಲಾ-ಕಾಲೇಜು ಆವರಣಗಳಲ್ಲಿ ಈಗಾಗಲೇ ೧೦೦ ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿತಂಬಾಕು ಸೇವನೆ ಹಾಗೂ ಮಾರಾಟನಿಷೇಧಿಸಿರುವ ಕಾರಣಶಾಲಾ ಶಿಕ್ಷಣ ಹಾಗೂ ಸಾಕ್ಷರತಾಇಲಾಖೆಯ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಚ್ಚರ ವಹಿಸುವಂತೆತಾಕೀತು ಮಾಡಿದಅವರು, ಮನುಷ್ಯನಆರೋಗ್ಯ ಮುಖ್ಯ, ಶಾಲಾ-ಕಾಲೇಜುಆವರಣದಲ್ಲಿಧೂಮಪಾನಕಂಡುಬಂದರೆ ನಿರ್ಧಾಕ್ಷೀಣ್ಯಕ್ರಮವಹಿಸಬೇಕು. ಚಲನಚಿತ್ರ ಮಂದಿರಗಳಲ್ಲಿ ಧೂಮಪಾನಕಂಡು ಬಂದರೆಆರೋಗ್ಯ ಇಲಾಖೆ ಅಧಿಕಾರಿಗಳು ಆ ಚಿತ್ರಮಂದಿರದ ಪರವಾನಿಗೆರದ್ದು ಪಡಿಸಿ ನೋಟೀಸ್ ಜಾರಿಗೊಳಿಸುವ ಕ್ರಮವಹಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ವ್ಯಾಪಕವಾಗಿಮಾಹಿತಿನೀಡಬೇಕು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಸರ್ಕಾರಿ ಇಲಾಖೆ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕುದುಷ್ಪರಿಣಾಮಗಳ ಕುರಿತು ಮಾಹಿತಿನೀಡುವ ೧೦೦ ಬೋರ್ಡ್‌ಗಳನ್ನು ಅಳವಡಿಸುವ ಕಾರ್ಯ ಕೈಗೊಳ್ಳಬೇಕು, ಅದೇರೀತಿಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವಸರ್ಕಾರಿ ಕಚೇರಿಗಳು ಸೇರಿದಂತೆ ಹೆಚ್ಚು ಸಂಖ್ಯೆಯ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಕನಿಷ್ಠ ೨೦ ಬೋರ್ಡ್‌ಗಳನ್ನು ಅಳವಡಿಸಬೇಕು, ಈ ಬಗ್ಗೆ ಆಯಾ ವ್ಯಾಪ್ತಿಯ ಸರ್ಕಾರಿ ವೈದ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮಾಹಿತಿ ನೀಡಬೇಕು ಎಂದರು.
ನಗರವ್ಯಾಪ್ತಿಯಲ್ಲಿತಂಬಾಕು ಪದಾರ್ಥಗಳ ಮಾರಾಟ ಮಾಡುವುದಕ್ಕೆ ನಗರಸಭೆಯಲ್ಲಿಪರವಾನಿಗೆ ಪಡೆದುಕೊಳ್ಳಬೇಕು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಪಂಚಾಯಿತಿಅಭಿವೃದ್ಧಿ ಅಧಿಕಾರಿಗಳ ಕಚೇರಿಯಲ್ಲಿಪರವಾನಿಗೆ ಪಡೆದುಕೊಳ್ಳಬೇಕು. ಪರವಾನಿಗೆ ನೀಡುವ ಸಮಯದಲ್ಲಿತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲುಸರ್ಕಾರನಿಗದಿ ಪಡಿಸಿರುವ ಷರತ್ತುಗಳು ಹಾಗೂ ನಿಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು, ಇದನ್ನು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರುಹಾಗೂಗ್ರಾಮ ಪಂಚಾಯತ್‌ಗಳ ಪಂಚಾಯತ್‌ಅಭಿವೃದ್ದಿ ಅಧಿಕಾರಿಗಳು ನಿಗಾ ವಹಿಸಿ, ಪರವಾನಗಿ ನೀಡಬೇಕು,ಆರೋಗ್ಯನಿರೀಕ್ಷಕರುಇದರತ್ತ ಗಮನ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ನಿರಂಜನ್, ಆರ್‌ಸಿಎಚ್ ಅಧಿಕಾರಿಡಾ.ರಾಜು, ಜಿಲ್ಲಾ ಸರ್ವೇಕ್ಷಣಾಧಿಕಾರಿಡಾ. ಕಿರಣ್ ಶಂಕರ್, ತಾಲ್ಲೂಕು ಮಟ್ಟದಆರೋಗ್ಯಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು,ಕಾರ್ಮಿಕ ಅಧಿಕಾರಿಗಳು ಸೇರಿದಂತೆಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿದ್ದರು.