ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕಿನ ಹಂಪಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಎಂ.ಬಿ.ಲೋಕೇಶ್ ಅವಿರೋಧವಾಗಿ ಆಯ್ಕೆಯಾದರು. ಈವರೆಗೆ ಉಪಾಧ್ಯಕ್ಷರಾಗಿದ್ದ ಮಹದೇವಕುಮಾರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು.
ಪಂಚಾಯಿತಿಯ ಆಡಳಿತ ಕಛೇರಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರನ್ನು ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸಿದ್ದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಿಡಿಪಿಒ ಅಣ್ಣಯ್ಯ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ಸದಸ್ಯರಾದ ಹೆಚ್.ಕೆ.ನಾಗರಾಜು, ಚೈತ್ರಾಲೋಕೇಶ್, ಹರಿರಾಜು, ಕಲಾವತಿ, ಕಾರ್ತಿಕ್, ಹೆಚ್.ಡಿ.ನಾಗೇಶ್, ಎಸ್.ವೈ.ಸೌಮ್ಯ, ವಿದ್ಯಾನಾರಾಯಣಶೆಟ್ಟಿ, ರವಿಕುಮಾರ್, ಎಂ.ಎಸ್.ಗಿರೀಶ್, ಬಿ.ಎಂ.ರೇವಣ್ಣ, ಪಿಡಿಒ ಅಶ್ವಿನಿ ಮತ್ತಿತರರು ಹಾಜರಿದ್ದರು. ಅಧ್ಯಕ್ಷೆ ರಮ್ಯಮಂಜುನಾಥ್, ಸದಸ್ಯರಾದ ಗೌರಮ್ಮ, ನಾಗಮಣಿ, ಎಂ.ಮಾನಸ, ಹೆಚ್.ಎಸ್.ರಾಮೇಗೌಡ ಗೈರು ಹಾಜರಾಗಿದ್ದರು.
ನೂತನ ಉಪಾಧ್ಯಕ್ಷ ಎಂ.ಬಿ.ಲೋಕೇಶ್ ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರಲ್ಲದೆ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಮುಖಂಡರಾದ ಎಂ.ಎಸ್.ಅನoತು, ನಾರಾಯಣಶೆಟ್ಟಿ, ಚಂದನ್, ಉಮೇಶ್, ಅರುಣ್ ಸೇರಿದಂತೆ ಇನ್ನಿತರರು ಹಾಜರಿದ್ದರು.