ಮಂಡ್ಯ: ನಾಲೆ ಆಧುನೀಕರಣ ಕಾಮಗಾರಿಯ ಸಾಮಾಗ್ರಿ ತೆರವು ವಿಳಂಬ ಹಿನ್ನಲೆ ಡ್ಯಾಂ ನಿಂದ ವಿ.ಸಿ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಬ್ರೇಕ್ ಹಾಕಲಾಗಿದೆ.
ಕಾಮಗಾರಿಯ ಸಾಮಾಗ್ರಿ ತೆರವು ಬಳಿಕ ನಾಲೆಗೆ ನೀರು ಹರಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ನೆನ್ನೆಯಿಂದಲೇ ವಿ.ಸಿ ನಾಲೆಗೆ ನೀರು ಬಿಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಜು-12 ರವರೆಗೆ 15 ದಿನಗಳ ನೀರು ಬಿಡುವುದಾಗಿ ಸಚಿವ ಚಲುವ ರಾಯಸ್ವಾಮಿ ಹೇಳಿದ್ದರು.
ಇದೀಗ ಕಾಮಗಾರಿ ಸ್ಥಳದಲ್ಲಿ ಸಾಮಾಗ್ರಿ ಸಾಗಿಸಿಲ್ಲವೆಂದು ನೀರು ಬಿಡುಗಡೆಗೆ ಮತ್ತಷ್ಟು ವಿಳಂಬ ಮಾಡಿದ್ದಾರೆ.