ಮೈಸೂರು: ನಗರದ ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಪೈ ವಿಸ್ತ ಹೋಟೆಲ್ ನಲ್ಲಿ ರೋಟರಿ ಸೆಂಟ್ರಲ್ ಮೈಸೂರಿನ 2024- 25 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆರ್ ತಂತ್ರಿ ಗೌರವಾಧ್ಯಕ್ಷರಾಗಿ ಸಮರ್ಥ್ ವೈದ್ಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ, ಯುಕ್ತಶ ನಂದಾಜಿ ಮಹಾರಾಜ, ದುಡಿಮೆಯ ಅಲ್ಪ ಭಾಗವನ್ನು ಸಮಾಜ ಸೇವೆಗೆ ಮೀಸಲಿರುವ ಸಂಕಲ್ಪ ತೊಡಬೇಕು. ವಿಶ್ವದಲ್ಲೇ ಪೋಲಿಯೋ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರೋಟರಿ ಕ್ಲಬ್, ಸಾಮಾಜಿಕ ಸೇವಾ ಕಾರ್ಯಗಳು ಶ್ಲಾಘನೀಯ ಎಂದು ಹೇಳಿದರು.
ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಸುಬ್ರಹ್ಮಣ್ಯ ಆರ್ ತಂತ್ರಿ, ವಿಶ್ವದಲ್ಲೇ ಇರುವ ಲಕ್ಷಾಂತರ ರೋಟರಿ ಸದಸ್ಯರು ರೋಟರಿಗೆ ನೀಡುವ ಪ್ರತಿ ಪೈಸೆಯೂ ಸದ್ಬಳಿಕೆಯಾಗುತ್ತಿದ್ದು, ಸಮಾಜದ ವಿವಿಧ ಕಾರ್ಯಕ್ಕೆ ಉಪಯೋಗವಾಗುತ್ತಿದೆ , ರೋಟರಿ ಕ್ಲಬ್ ಮೂಲಕ ಸ್ನೇಹಿತರನ್ನು ಹೊಂದಬಹುದಾಗಿದ್ದು, ಅಂತರಾಷ್ಟ್ರೀಯ ಸಂಸ್ಥೆ ಮೂಲಕ ಸೇವಾ ಕಾರ್ಯ ಕೈಗೊಳ್ಳಬಹುದಾಗಿದೆ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದಾಗ ನಮಗೆ ಆತ್ಮತೃಪ್ತಿ ದೊರಕುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಯುಕ್ತಶ ನಂದಾಜಿ ಮಹಾರಾಜ, ರೋಟರಿ ಪ್ರಧಾನ ಅಧಿಕಾರಿ ಸತೀಶ್ ಬೋಲಾರ್, ನಿಕಟ ಪೂರ್ವಾಧ್ಯಕ್ಷರಾದ ಎನ್ ಉಮೇಶ್, ರೋ ಸಹಾಯಕ ಗವರ್ನರ್ ಚೇತನ್ ವಿಶ್ವನಾಥ್, ನಿಕಟಪೂರ್ವ ಕಾರ್ಯದರ್ಶಿ ಪ್ರೇಮ್ ಸಾಗರ್, ಉಪಾಧ್ಯಕ್ಷ ವಿಜಯೇಂದ್ರ, ವಿವಿಧ ಹುದ್ದೆಯಲ್ಲಿ ಜವಾಬ್ದಾರಿಯಲ್ಲಿರುವ ಎ ಆರ್ ರವೀಂದ್ರ ಭಟ್,ಆಂಟೋನಿ ಮೋಸೆಸ್, ಅನಿಲ್ ಪದಕಿ, ಗುರುಪ್ರಸಾದ್, ಸಚ್ಚಿದಾನಂದ ಮೂರ್ತಿ, ಜಯಪ್ರಕಾಶ್ ಎಂ ಎಸ್, ಎಸ್ ಆರ್ ಸ್ವಾಮಿ, ದಿನೇಶ್, ಅರುಣ್, ಜ್ಯೋತಿ ಅಶೋಕ್, ರಜನಿ, ವಿವೇಕ್ ಹಾಗೂ ಇನ್ನಿತರರು ಹಾಜರಿದ್ದರು.