Sunday, April 20, 2025
Google search engine

Homeರಾಜ್ಯಅಂಗಡಿ ನಾಮಪಲಕಗಳಲ್ಲಿ ಕನ್ನಡ ಕಡ್ಡಾಯಕ್ಕಾಗಿ  ಕನ್ನಡ ಸೇನೆ ವತಿಯಿಂದ ನಗರಸಭೆ ಆಯುಕ್ತರಿಗೆ ಮನವಿ

ಅಂಗಡಿ ನಾಮಪಲಕಗಳಲ್ಲಿ ಕನ್ನಡ ಕಡ್ಡಾಯಕ್ಕಾಗಿ  ಕನ್ನಡ ಸೇನೆ ವತಿಯಿಂದ ನಗರಸಭೆ ಆಯುಕ್ತರಿಗೆ ಮನವಿ

ಮಂಡ್ಯ: ಅಂಗಡಿ ನಾಮಪಲಕಗಳಲ್ಲಿ ಕನ್ನಡ ಕಡ್ಡಾಯಕ್ಕಾಗಿ ಕನ್ನಡ ಸೇನೆ ವತಿಯಿಂದ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಮಂಡ್ಯದ ನಗರಸಭೆ ಕಚೇರಿಗೆ ತೆರಳಿ  ನಗರಸಭೆ ಆಯುಕ್ತರಾದ ಮಂಜುನಾಥ್ ಗೆ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಮನವಿ ಸಲ್ಲಿಸಿತು.

ಮಂಡ್ಯ ನಗರದ ಪ್ರಮುಖ ರಸ್ತೆ ಜಿ.ಮಾದೇಗೌಡರ ಹೆಸರು ಹಾಗೂ ನಾಮ ಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಆಗ್ರಹಿಸಿದರು.

ರಾಜ್ಯ ಸರ್ಕಾರ ವರ್ತಕರ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯ ಮಾಡಿದೆ. ಆದರೂ ಕೆಲವರು ಕನ್ನಡ ನಾಮಫಲಕ ಹಾಕದೆ ನಿರ್ಲಕ್ಷ್ಯ ತೋರಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ನಗರದ ಪ್ರಮುಖ ರಸ್ತೆಗೆ ಕಾವೇರಿ ಹೋರಾಟಗಾರ ದಿವಂಗತ ಜಿ.ಮಾದೇಗೌಡರ ಹೆಸರು ನೀಡಲು ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular