Saturday, April 19, 2025
Google search engine

Homeರಾಜ್ಯಸುದ್ದಿಜಾಲದೇಶಿಯ ಪರಂಪರೆ, ರಾಷ್ಟ್ರೀಯ ಕಾಳಜಿ ಉಳಿಯಬೇಕು:ಸಂಸದ ಯದುವೀರ್ ಒಡೆಯರ್

ದೇಶಿಯ ಪರಂಪರೆ, ರಾಷ್ಟ್ರೀಯ ಕಾಳಜಿ ಉಳಿಯಬೇಕು:ಸಂಸದ ಯದುವೀರ್ ಒಡೆಯರ್

ಪಿರಿಯಾಪಟ್ಟಣ: ರಾಷ್ಟ್ರೀಯತೆಯ ಕಾಳಜಿ ಹಾಗೂ ದೇಶಿಯ ಪರಂಪರೆಯನ್ನು ಉಳಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬೇಕು ಎಂಬ ಉದ್ದೇಶದಿಂದ ತಾವು ರಾಜಕೀಯಕ್ಕೆ ಬಂದಿರುವುದಾಗಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಪಟ್ಟಣದ ಮಂಜುನಾಥ ಸಮುದಾಯದ ಭವನದಲ್ಲಿ ಮಂಗಳವಾರ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ರಾಷ್ಟ್ರೀಯತೆಯ ಉಳಿವಿಗೆ ಗಟ್ಟಿತನದ ನಾಯಕತ್ವ ಅತ್ಯಗತ್ಯ ಹಾಗಾಗಿ ದೇಶದ ಸುಭದ್ರತೆ ಹಾಗಾಗಿ ರಾಷ್ಟ್ರೀಯತೆ ಉಳಿವಿಗಾಗಿ ಮೋದಿಯವರಿಗೆ ಶಕ್ತಿ ತುಂಬುವ ಉದ್ದೇಶದಿಂದ ರಾಜಕೀಯ ಪ್ರವೇಶ ಮಾಡಿ ಹಲವಾರು ಸವಾಲುಗಳ ನಡುವೆ ಜಯ ಸಾಧಿಸಿದ್ದೇವೆ.

ಮೈಸೂರು ಮತ್ತು ಕೊಡಗು ಜಿಲ್ಲೆಗಳು ತನ್ನ ಪ್ರಕೃತಿ, ಪರಿಸರ ಮತ್ತು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾಗಿವೆ ಇವುಗಳ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಕಳೆದ ಹತ್ತು ವರ್ಷಗಳ ನಂತರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಗೆಲ್ಲಲೇಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತನ್ನೆಲ್ಲ ಶಕ್ತಿ ಮತ್ತು ಸಾಮರ್ಥ್ಯವನ್ನು ಬಳಸಿ ಚುನಾವಣೆ ಎದುರಿಸಿತು ಈ ಸಂದರ್ಭದಲ್ಲಿ ನಮ್ಮ ಮೇಲೆ ಅನೇಕ ಅಪಪ್ರಚಾರನಡೆಸಿತು.

ಯದುವೀರ್ ರಾಜವಂಶಸ್ಥರು, ಅವರು ಸಾಮಾನ್ಯ ಜನರ ಕೈಗೆ ಸಿಗುತ್ತಾರೆಯೇ ಎನ್ನುವ ಅನುಮಾನವನ್ನು ನನ್ನ ವಿರುದ್ಧ ಬಿತ್ತಿದರೂ ಜನತೆ ನನ್ನ ಕೈ ಹಿಡಿದು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ ಅವರೆಲ್ಲರೂ ಧನ್ಯವಾದಗಳು. ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಬೆಳೆಗಾರರನ್ನು ಉಳಿಸುವ ನಿಟ್ಟಿನಲ್ಲಿ ರೈತರ ಹಿತ ಕಾಯುವ ಕೆಲಸ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಬರುವ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸುವ ಕೆಲಸ ಮಾಡೋಣ ಈಗಿಂದಲೇ ಕಾರ್ಯಕರ್ತರು ಸನ್ನದ್ಧರಾಗಿ ಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆ.ಮಹದೇವ್, ಹೆಚ್.ಸಿ.ಬಸವರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಪಿ.ರಾಜೇಂದ್ರ, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ ಮಾತನಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ಆರ್.ಟಿ.ಸತೀಶ್, ಹೆಚ್.ಡಿ.ರಾಜೇಂದ್ರ, ಪ್ರಶಾಂತ್ ಗೌಡ, ಐಲಾಪುರ ರಾಮು, ಚಂದ್ರಶೇಖರಯ್ಯ, ಅಣ್ಣೇಗೌಡ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular