ಮಂಡ್ಯ: ಟಿಎಚ್ಓ ಹಾಗೂ ವೈದ್ಯರ ಜೊತೆ ಸಭೆ ನಡೆಸಲಾಗಿದ್ದು, ಡೇಂಘಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೇನೆ ಎಂದು ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಮನೆ ಮನೆಗೆ ಭೇಟಿ ಕೊಟ್ಟು ಅರಿವು ಮೂಡಿಸಲು ಸೂಚಿಸಿರುವುದಾಗಿ ತಿಳಿಸಿದರು.
ತುಂಬಾ ದಿನ ನಿಲ್ಲುವು ನೀರನ್ನ ಸ್ವಚ್ಛಗೊಳಿಸಿ. ಸಾರ್ವಜನಿಕರ ಕೈ ಜೋಡಿಸಿದರೆ ಮಾತ್ರ ಡೇಂಘಿ ನಿಯಂತ್ರಣಕ್ಕೆ ಸಾಧ್ಯ. ಫ್ರೀಡ್ಜ್, ಸಂಪ್ ಗಳನ್ನು ಸ್ವಚ್ಛ ಗೊಳಿಸಿ ಡೇಂಘಿ ಹರಡದಂತೆ ಎಚ್ಚರಿಕೆ ವಹಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ರಸ್ತೆ ಅಭಿವೃದ್ಧಿ ಕಾಮಗಾರಿಗೆ ವೀಕ್ಷಣೆ

ಮಂಡ್ಯದ ನಂದವೃತ್ತ ದಿಂದ ಕಾರೇಮನೆ ಗೇಟ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಗಣಿಗ ರವಿಕುಮಾರ್ ವೀಕ್ಷಿಸಿದರು
ಹಲವು ವರ್ಷಗಳಿಂದ ಗುಂಡಿ ಬಿದ್ದಿದ್ದ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ಕೊಟ್ಟಿದ್ದಾರೆ.
2ನೇ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಟ್ಟು ನಂದವೃತ್ತದಿಂದ ಕಾರೆಮನೆ ಗೇಟ್ ವರೆಗೂ ಕಾಲ್ನಡಿಗೆಯಲ್ಲಿ ಕಾಮಗಾರಿ ವೀಕ್ಷಣೆ ಮಾಡಿದರು.
ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಮಂಡ್ಯ ನಗರ ಅಭಿವೃದ್ಧಿಗೆ 30 ಕೋಟಿ ಹಣ ಮಿಸಲಿಟ್ಟಿದ್ದಾರೆ. ಹಣ ಬಂದ ತಕ್ಷಣ ಮತಷ್ಟು ಅಭಿವೃದ್ಧಿ ಕಾರ್ಯ ನಡೆಯುತ್ತದೆ. ನಗರದ ಮತಷ್ಟು ಅಭಿವೃದ್ಧಿ ಕಾಣಲಿದೆ ಎಂದು ಶಾಸಕ ಗಣಿಗ ರವಿಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.