ಮಂಡ್ಯ: ಸತತ ಒಂದುವರೆ ವರ್ಷದ ಬಳಿಕ ವಿಸಿ ನಾಲೆಗೆ ನೀರು ಹರಿದು ಬಂದಿದೆ. ಕೆಆರ್ ಎಸ್ ಜಲಾಶಯದಿಂದ ವಿಸಿ ನಾಲೆಗೆ ಕಾವೇರಿ ನೀರಾವರಿ ನಿಗಮ ನೀರು ಹರಿಸಿದೆ.
ಸರ್ಕಾರದ ಸೂಚನೆಯಂತೆ ವಿಸಿ ನಾಲೆಗೆ ಅಧಿಕಾರಿಗಳು ನೀರು ಹರಿಸಿದ್ದಾರೆ.
ಕಳೆದ ಬಾರಿ ಡ್ಯಾಂ ಭರ್ತಿಯಾಗದ ಹಿನ್ನೆಲೆ ವಿಸಿ ನಾಲೆಗೆ ನೀರು ಹರಿಸೋದನ್ನ ನಿಲ್ಲಿಸಲಾಗಿತ್ತು. ಜುಲೈ 8 ರಂದು ನಾಲೆಗೆ ನೀರು ಹರಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು.
ನಾಲೆಯಲ್ಲಿದ್ದ ಕಾಮಗಾರಿ ಉಪಕರಣಗಳ ತೆರವು ತಡವಾದ್ದರಿಂದ ಇಂದಿನಿಂದ ವಿಸಿ ನಾಲೆಗೆ ನೀರು ಬಿಡುಗಡೆ ಮಾಡಲಾಗಿದೆ.
ವಿಸಿ ನಾಲೆಗೆ ನೀರು ಹರಿಸಿದ್ದರಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿದೆ.