ಪಿರಿಯಾಪಟ್ಟಣ: ತಾಲ್ಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಘು ಅಧ್ಯಕ್ಷರಾಗಿ ಜಯಭೇರಿ ಬಾರಿಸಿದರು.
ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಚುನಾವಣಾ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, 30 ತಿಂಗಳಲ್ಲಿ 3 ಜನರು ತಲಾ 10 ತಿಂಗಳಂತೆ ಅಧಿಕಾರ ನೀಡುವಂತೆ ಪಕ್ಷದ ಆಂತರಿಕ ಒಪ್ಪಂದ ಹಾಗೂ ವರಿಷ್ಠರ ತೀರ್ಮಾನದಂತೆ ನಿಗದಿಯಾಗಿ ಮೊದಲ 10 ತಿಂಗಳು ನಿಸಾರ್ ಅಹಮದ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ರಾಜಿನಾಮೆ ನೀಡಿ ಎರಡನೆ ಅವಧಿಗೆ ರಘು ರವರಿಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚನೆ ನೀಡಲಾಗಿತ್ತು ಆದರೆ ಮತ್ತೊಬ್ಬ ಸದಸ್ಯ ರಾಜು ನನಗೆ ಎರಡನೆ ಅವಧಿಗೆ ಅಧ್ಯಕ್ಷ ಸ್ಥಾನ ಬೇಕೆಬೇಕು ಎಂದು ಹಠಕ್ಕೆ ಬಿದ್ದಿದ್ದರ ಪರಿಣಾಮ ಇಬ್ಬರಲ್ಲಿ ಒಮ್ಮತ ಮೂಡದ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು 26 ಸದಸ್ಯರ ಪೈಕಿ ರಘು 17 ಮತಗಳನ್ನು ಪಡೆದು ಜಯಶೀಲರಾದರೆ ರಾಜು 9 ಮತಗಳನ್ನು ಪಡೆದು ಪರಾಭವಗೊಂಡರು.
ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಲೋಕೋಪಯೋಗಿ ಇಲಾಖೆ ಎಇಇ, ಎಂ.ಆರ್.ವೆಂಕಟೇಶ್ ನೂತನ ಅಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ರಘು ಮಾತನಾಡಿ ನಮ್ಮ ಸದಸ್ಯರು ಹಾಗೂ ಪಂಚಾಯಿತಿ ವ್ಯಾಪ್ತಿಯ ಜನತೆ ಕಳೆದ ಅವಧಿಯಲ್ಲಿ ಹಿಂದಿನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸಹಕಾರ ನೀಡಿದಂತೆ ನಮಗೂ ಎಲ್ಲ ಸದಸ್ಯರು ಸಹಕಾರ ನೀಡುವ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಮುಂದಾದರೆ ಗ್ರಾಮಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ ಹಾಗಾಗಿ ಎಲ್ಲರೂ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪಿಡಿಒ ಬೋರೆಗೌಡ, ಉಪಾಧ್ಯಕ್ಷೆ ಗೀತಾ ಸುಬ್ರಹ್ಮಣ್ಯ, ಸದಸ್ಯರಾದ ಸುಮಾ, ರಘು, ಸುರೇಶ್, ಮಂಜು, ರಾಜು, ನವೀನ್ ಕುಮಾರ್, ದಾವೂದ್, ರಘು, ಹರೀಶ್, ಎಲಿಜಬಾತ್, ಚಂದ್ರು, ಭಾರತಿ, ಮುತ್ತುರಾಜ್, ಐಶಾ, ಶಿವಮ್ಮ, ಮಂಜುಳಾ , ಲಕ್ಷ್ಮಿ, ಸಣ್ಣ ಜವರಯ್ಯ, ಹರೀಶ್ ಮುಖಂಡರಾದ ಮಾನು ಇನಾಯತ್, ಜಗದೀಶ್ , ಸುಬ್ರಹ್ಮಣ್ಯ, ಪ್ರವೀಣ್ ಶೆಟ್ಟಿ, ಜನಾರ್ದನ್, ಧನರಾಜ್, ಈಶ್ವರ್, ದಿನೇಶ್, ರಘು, ಮಹದೇವ, ದಿನೇಶ್, ಸ್ವಾಮಿ, ರಾಮೇಗೌಡ, ಅಸ್ಲಾಂ, ಗಣೇಶ, ಮಂಜುನಾಥ್, ಸೇರಿದಂತೆ ಮತ್ತಿತರರು ಹಾಜರಿದ್ದು ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದುಬಸ್ತು ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ರಘು ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು