ಚನ್ನಪಟ್ಟಣ: ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಡಾ. ಟಿ.ವಿ.ಶಂಕರ್ ಅವರು ಅಭಿಪ್ರಾಯಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡರ ನೇತೃತ್ವದಲ್ಲಿ ವಿಶ್ವ ವೈದ್ಯರ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ವೈದ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಾಣದ ದೇವರು ಮನುಷ್ಯರನ್ನು ಸೃಷ್ಠಿ ಮಾಡಿದರೆ ಅವರನ್ನು ಆರೋಗ್ಯವಂತ ವಾಗಿಸುವಲ್ಲಿ ಕಾಣದ ದೇವರನ್ನು ವೈದ್ಯರಲ್ಲಿ ಕಾಣುವ ನಿಟ್ಟಿನಲ್ಲಿ ಜನರು ನಮ್ಮನ್ನು ನಂಬಿ ಬರುತ್ತಾರೆ.
ಆದರೆ ಇತ್ತೀಚೆಗೆ ಸಮಾಜದಲ್ಲಿ ಎಲ್ಲಾ ರಂಗದಲ್ಲೂ ನಕಲಿ ಇದ್ದಂತೆ ವೈದ್ಯಕೀಯ ರಂಗದಲ್ಲೂ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಇವರು ಹಣದಾಸೆಗೆ ಜನರ ಆರೋಗ್ಯವನ್ನೇ ಬಲಿ ಕೊಡುತ್ತಿದ್ದಾರೆ. ಇದರಿಂದ ಪ್ರಾಮಾಣಿಕವಾಗಿ ತಮ್ಮ ಆರೋಗ್ಯವನ್ನು ಪಣಕ್ಕೆ ಇಟ್ಟು ಸೇವೆ ಮಾಡುವ ವೈದ್ಯರಿಗೂ ಕೆಟ್ಟ ಹೆಸರು ಬರುವಂತಾಗಿದೆ ಈ ನಿಟ್ಟಿನಲ್ಲಿ ನಕಲಿ ವೈದ್ಯರ ಕಡಿವಾಣಕ್ಕೆ ಹೋರಾಟ ಮಾಡುವ ಅಗತ್ಯ ಇದೆ. ಜೊತೆಗೆ ಇತ್ತೀಚೆಗೆರೆ ಕೆಲ ವೈದ್ಯರಲ್ಲೂ ಸೇವಾ ಮನೋಭಾವ ಕಡಿಮೆ ಆಗಿದೆ ಎಂಬ ಮಾತುಗಳಿದ್ದು ಈ ಬಗ್ಗೆ ವೈದ್ಯರೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವೈದ್ಯರ ಸೇವಾ ಮನೋಭಾವವನ್ನು ಗುರುತಿಸಿ ಗೌರವಿಸುತ್ತಿರುವ ರಮೇಶ್‌ಗೌಡರ ಕಾರ್ಯ ಶ್ಲಾಘನೀಯ ಎಂದರು.
ಡಾ. ಸಂಪಂಗಿ ರಾಮಯ್ಯ ಅವರು ಮಾತನಾಡಿ, ವೈದ್ಯರಾದ ನಮ್ಮನ್ನು ವೈದ್ಯೋ ನಾರಾಯಣೋ ಹರಿ ಎಂದು ಜನರು ನಮ್ಮನ್ನು ದೇವರೆಂದು ನಂಬಿಕೊಂಡಿದ್ದಾರೆ. ನಾವು ಸಹ ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಪ್ರಾಣವನ್ನು ಸಹ ಲೆಕ್ಕಿಸದೆ ಪ್ರಾಮಾಣಿಕವಾಗಿ ಹಗಲಿರುಳು ಸೇವೆ ನೀಡುತ್ತಾ ಜನರ ಆರೋಗ್ಯ ಕಾಪಾಡಲು ಶ್ರಮಿಸುತ್ತಿದ್ದು, ನಮ್ಮ ಸೇವೆಯನ್ನು ಪರಿಗಣಿಸಿ ನಮ್ಮನ್ನು ಅಭಿನಂದಿಸುತ್ತಿರುವ ಕಕಜ ವೇದಿಕೆಯ ಕಾರ್ಯ ಶ್ಳಾಘನೀಯವಾಗಿದೆ ಎಂದರು ಅಭಿನಂದಿಸಿದರು.
ಡಾ. ಮಲವೇಗೌಡರು ಮಾತಾನಾಡಿ, ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಕನ್ನಡ ನಾಡು, ನುಡಿ, ಜಲ ಭಾಷೆ, ಗಡಿಯ ವಿಚಾರದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಇದರ ನಡುವೆ ಸಮಾಜದಲ್ಲಿನ ಸಾಧಕರನ್ನು ಗೌರವಿಸುವ ಜೊತೆಗೆ ಸಮಾಜಕ್ಕೆ ತಮ್ಮ ಸೇವೆ ಮುಡಿಪಿಟ್ಟ ಎಲ್ಲಾ ರಂಗದ ವೃತ್ತಿಬಾಂದವರನ್ನು ಅಭಿನಂದಿಸಿ ಪ್ರೋತ್ಸಾಹಿತ್ತಾ ಬಂದಿದ್ದು ಅದೇ ನಿಟ್ಟಿನಲ್ಲಿ ಕಳೆದ ೪ ವರ್ಷಗಳಿಂದ ವೈದ್ಯರ ದಿನಾಚರಣೆ ಮಾಡಿ ನಮ್ಮನ್ನು ಅಭಿನಂದಿಸಿ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತಾ ಬಂದಿದ್ದಾರೆ, ನಮ್ಮ ಮೇಲೆ ಜವಾಬ್ದಾರಿ ಹೆಚ್ಚಾದಂತೆ ನಮ್ಮ ವೃತ್ತಿಯಲ್ಲಿ ಉಮ್ಮಸ್ಸು ಇಮ್ಮಡಿಯಾಗುವ ಜೊತೆಗೆ ಸೇವಾ ಮನೋಭಾವ ಜಾಗೃತವಾಗುತ್ತದೆ. ಈ ನಿಟ್ಟಿನಲ್ಲಿ ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲಾ ಮತ್ತಷ್ಟು ಉತ್ಸುಕರಾಗಿ ಸೇವೆ ಮಾಡುತ್ತೇವೆ ಎಂದರು.
ಡಾ. ರಾಜಶ್ರೀ ಅವರು ಮಾತನಾಡಿ, ಕಕಜ ವೇದಿಕೆ ರಮೇಶ್‌ಗೌಡರು ಎಲ್ಲಾ ಕ್ಷೇತ್ರದಲ್ಲಿ ಕೈಜಾಚಿದ್ದು ಆ ಕ್ಷೇತ್ರದ ಸೇವೆಯನ್ನು ಗುರುತಿಸಿ ಅವರನ್ನು ಅಭಿನಂದಿಸುವ ಮೂಲಕ ಹೆಚ್ಚಿನ ಜವಾಬ್ದಾರಿ ಹೊರಿಸುತ್ತಾ ಬಂದಿದ್ದಾರೆ. ಸಮಾಜದಲ್ಲಿ ಒಂದೆಡೆ ವೈದ್ಯೋ ನಾರಾಯಣೋ ಹರಿ ಎಂದು ವೈದ್ಯರಲ್ಲಿ ದೇವರೆಂದು ಭಾವಿಸುವ ಜನರ ನಡುವೆ ಕೆಲ ವೈದ್ಯರ ನಡೆ ವೈದ್ರು ಜನರನ್ನು ಸುಲಿಗೆ ಮಾಡುತ್ತಾರೆ ಎಂಬ ಆರೋಪಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ ೨೦೧೯ ರ ಕೊರೋನಾ ಸಂದರ್ಭದಲ್ಲಿ ಜನರನ್ನು ತಮ್ಮ ಕುಟುಂಬದವರೇ ಮುಟ್ಟಲು ಹೆಸರುತ್ತಿದ್ದ ಸಂದರ್ಭದಲ್ಲಿ ವೈದ್ಯರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೇವೆ ಮಾಡಿದ ಬಳಿಕ ವೈದ್ಯರನ್ನು ನಿಜವಾದ ದೇವರೆಂದು ಭಾವಿಸಿದ್ದಾರೆ. ಈ ನಿಟ್ಟಿನಲ್ಲೇ ಆ ವರ್ಷ ರಮೇಶ್‌ಗೌಡರು ತಾಲೂಕಿನ ಎಲ್ಲಾ ವೈದ್ಯರನ್ನು ಅಭಿನಂದಿಸಿದರು. ಈ ಸನ್ಮಾನ ಒಂದು ವರ್ಷಕ್ಕೆ ಸೀಮಿತ ಎಂದುಕೊಂಡಿದ್ದೆವು, ಆದರೆ ರಮೇಶ್‌ಗೌಡರು ಪ್ರತಿವರ್ಷ ನಮ್ಮ ಸೇವೆಯನ್ನು ಗುರುತಿಸಿ ಅಭಿನಂದಿಸುತ್ತಾ ಬಂದಿದ್ದಾರೆ. ಇದು ಹೊಸದಾಗಿ ವೃದ್ಯಕೀಯ ವೃದ್ಧಿಗೆ ಬರುವ ವೈದ್ಯರಿಗೂ ಪ್ರೋತ್ಸಾಹವಾಗಲಿದೆ ಎಂದರು.
ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಮಾತನಾಡಿ, ಕಾಣದ ದೇವರು ನಮಗೆ ತಾಯಿ ಗರ್ಭದಿಂದದ ಜನ್ಮಕೊಟ್ಟರೆ ನಮ್ಮನ್ನು ಯಾವುದೇ ರೋಗಗಳು ಬಾರದಂತೆ ಕನಿಷ್ಟು ೭೦ ವರ್ಷಗಳ ಕಾಲ ಆರೋಗ್ಯವಂತವಾಗಿವುದು ಕಣ್ಣಿಗೆ ಕಾಣು ವೈದ್ಯರು ಎಂದರೆ ತಪ್ಪಾಗಲಾರದು, ನಾವು ಪೌರಾಣಿಕ ಸಿನಿಮಾಗಳನ್ನು ನೋಡಿದಾಗ ಸತಿಸಾವಿತ್ರಿ ಯಮನೊಂದಿಗೆ ಹೋರಾಟ ಮಾಡಿ ಪತಿಯ ಪ್ರಾಣವನ್ನು ವಾಪಸ್ ಪಡೆಯುತ್ತಾಳೆ. ದೇವರ ಭಕ್ತಿಗೆ ಸತ್ತವರನ್ನು ದೇವರು ಆಶೀರ್ವಾದ ಮಾಡಿ ಜೀವಂತ ಮಾಡಿದ ದೃಶsಗಳು ಕಣ್ಮುಂದೆ ಬಂದರೆ ಪರದೆಗೆ ಕೈಮುಗಿಯುವ ಮನಸ್ಸಾಗುತ್ತದೆ. ಆದರೆ ಅವೆಲ್ಲಾ ನಮ್ಮ ಕಾಲ್ಪನಿಕವಾಗಿದ್ದು ನಮ್ಮನ್ನು ಕಾಪಾಡುವ ನಿಜವಾದ ದೇವರುಗಳು ವೈದ್ಯರು ಮಾತ್ರ ಎಂದು ಬಣ್ಣಿಸಿದರು.
ಈತ ಬದುಕುವುದಿಲ್ಲ ಎಂದು ಕೈ ಬಿಟ್ಟ ಎಷ್ಟೋ ಮಂದಿಗೆ ವೈದ್ಯರು ಜೀವ ಕೊಟ್ಟಿದ್ದಾರೆ, ಆದರೂ ಅವರು ದೇವರು ಕಾಪಾಡಿದ ಎನ್ನುತ್ತಾರೆ ಹೊರತು ವೈದ್ಯರು ಮತ್ತೊಮ್ಮೆ ಜೀವ ಕೊಟ್ಟರು ಎಂದು ಹೇಳಿಕೊಳ್ಳುವುದಿಲ್ಲ. ಅಷ್ಟು ಹಣ ಕೊಟ್ಟೆವು ಜೀವ ಉಳಿಸಿದರು ಎಂದು ಹೇಳುತ್ತಾರೆ ಆದರೆ ಆ ಹಣವನ್ನು ಬೇರೆಯವರಿಗೆ ಕೊಟ್ಟರೆ ಜೀವ ಉಳಿಸಲು ಆಗುವುದಿಲ್ಲ. ವೈದ್ಯರಿಗೆ ದೇವರ ಶಕ್ತಿ ಇರುವ ನಿಟ್ಟಿನಲ್ಲಿ ನಮ್ಮ ಜೀವ ಕಾಪಾಡುತ್ತಾರೆ. ಈ ನಿಟ್ಟಿನಲ್ಲಿ ವರ್ಷಕ್ಕೆ ಒಮ್ಮೆಯಾದರೂ ವೈದ್ಯರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ಮನುಷ್ಯರಿಗೆ ಆರೋಗ್ಯ ಭಾಗ್ಯ ಒಂದಿದ್ದರೆ ಎಲ್ಲಾ ಸಿರಿಸಂಪತ್ತುಗಳನ್ನು ಆತ ಸಂಪಾದನೆ ಮಾಡುತ್ತಾನೆ. ಆದರೆ ಆತನ ಆರೋಗ್ಯ ಕೆಟ್ಟಾಗ ಎಷ್ಟೇ ಸಿರಿ ಸಂಪತ್ತು ಇದ್ದರೂ ಸಹ ಆತನನ್ನು ಕಾಪಾಡಲು ಸಾಧ್ಯವಿಲ್ಲ. ನಾವು ಕೆಲಸ ಕಾರ್ಯಗಳಿಲ್ಲದಿದ್ದರೂ ಸಹ ರಾತ್ರಿ ವೇಳೆ ಮೊಬೈಲ್‌ಗಳನ್ನು ಆಫ್ ಮಡೋ ಅಥವಾ ಸೈಲೆಂಟ್ ಮಾಡೋ ಮಲಗುತ್ತೇವೆ. ಆದರೆ ವೈದ್ಯರು ದಿನನಿತ್ಯ ಜನರ ಸೇವೆ ಮಾಡಿ ಒತ್ತಡದಲ್ಲಿದ್ದರೂ ಸಹ ತಡರಾತ್ರಿ ಕರೆ ಮಾಡಿದರೂ ನಮ್ಮ ಕರೆ ಸ್ವೀಕರಿಸಿ ಪ್ರಥಮ ಚಿಕಿತ್ಸೆಯ ಸಲಹೆಗಳನ್ನು ನೀಡುತ್ತಾರೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುತ್ತಾ ಬಂದಿರುವ ವೈದ್ಯರಿಗೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ವೈದ್ಯರುಗಳಾದ ಶ್ರೇಷ್ಠ ವೈದ್ಯ ಪ್ರಶಸ್ತಿಯಾಗಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದ ಡಾ. ಮುತ್ತುರಾಜು, ಡಾ. ರಾಜಣ್ಣ, ಡಾ. ಶಿವಕುಮಾರ್, ಡಾ. ರಂಗನಾಥ್, ಡಾ. ಪ್ರಕೃತಿ ರಾಜ್ ಸನ್ಮಾನಿಸಲಾಯಿತು.