ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾ.ಪಂ.ಮಾಜಿ ಅಧ್ಯಕ್ಷೆ ಮಲ್ಲಿಕಾ ರವಿಕುಮಾರ್ ಅವರಿಗೆ ಮೈಮುಲ್ ಗೆ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೀಗೌಡ ಅವರಿಗೆ ಅಭಿನಂದಿಸಲಾಯಿತು.
ಮೈಮುಲ್ ಗೆ ನಾಮ ನಿರ್ದೇಶನಗೊಂಡಿರುವ ಮಲ್ಲಿಕಾ ರವಿಕುಮಾರ್ ಹಾಗು ವೀರಶೈವ ಲಿಂಗಾಯತ ಸಮಾಜದ ಅವರ ನೂರಾರು ಬೆಂಬಲಿಗರು ದೊಡ್ಡಸ್ವಾಮೀಗೌಡರ ನಿವಾಸಕ್ಕೆ ತೆರಳಿ ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ’ವೀರಶೈವ ಲಿಂಗಾಯತ ಸಮಾಜಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ.ಜಿ.ಪಂ.,ಎಪಿಎಂಸಿ,ಪಿಎಲ್ ಡಿ ಬ್ಯಾಂಕ್‌ಗಳಲ್ಲೂ ಉನ್ನತ ಅಧಿಕಾರವನ್ನು ದೊಡ್ಡಸ್ವಾಮೀಗೌಡರು ಹಾಗು ಅವರ ಮಗ ಶಾಸಕ ಡಿ.ರವಿಶಂಕರ್ ನಮ್ಮ ಸಮಾಜಕ್ಕೆ ಕಲ್ಪಿಸಿದ್ದಾರೆ.ಈ ಹಿಂದೆ ಮೈಮುಲ್ ಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಮಾರಗೌಡನಹಳ್ಳಿ ಜಗದೀಶ್ ಅವರ ಅಕಾಲಿಕ ಸಾವಿನಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ನಮ್ಮ ಸಮಾಜದ ಮಲ್ಲಿಕಾ ಅವರನ್ನು ನೇಮಕ ಮಾಡಿರುವ ನಮ್ಮನಾಯಕರಾದ ದೊಡ್ಡಸ್ವಾಮೀಗೌಡರಿಗೆ ಹಾಗು ಶಾಸಕ ಡಿ.ರವಿಶಂಕರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ದೊಡ್ಡಸ್ವಾಮೀಗೌಡರು’ನನ್ನ ಪುತ್ರ ಡಿ.ರವಿಶಂಕರ್ ಅವರು ಶಾಸಕರಾಗಿ ಆಯ್ಕೆಯಾಗಲು ಇತರೆ ಸಮಾಜಗಳಹಾಗೆ ವೀರಶೈವ ಲಿಂಗಾಯತ ಸಮಾಜ ಪ್ರಮುಖಪಾತ್ರ ವಹಿಸಿದೆ.ಈ ಸಮಾಜದ ಋಣ ತೀರಿಸುವುದು ನನ್ನ ಜವಾಬ್ದಾರಿ.ಬೇರೆ ಸಮಾಜದವರ ಒತ್ತಡ ಇದ್ದರೂ ವೀರಶೈವ ಸಮಾಜದ ಜಗದೀಶ್ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಇದೆ ಸಮಾಜದ ಕ್ರಿಯಾಶೀಲ ವ್ಯಕ್ತಿತ್ವದ,ಸರಳ ಸಜ್ಜನಿಕೆಯ ಮಲ್ಲಿಕಾ ರವಿಕುಮಾರ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.ಮುಂದೆ ನಡೆಯುವ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲೂ ವೀರಶೈವ ಸಮಾಜಕ್ಕೆ ಮತ್ತಷ್ಟು ಅವಕಾಶ ನೀಡಲಾಗುವುದು.
ಈ ಹಿಂದೆಯೂ ನಮ್ಮ ಪಕ್ಷ ಈ ಸಮಾಜಕ್ಕೆ ಉನ್ನತ ಸ್ಥಾನಮಾನ ನೀಡಿದೆ.ಕೆ.ಆರ್.ನಗರ ಪಟ್ಟಣದಲ್ಲಿ ಸ್ಥಗಿತಗೊಂಡಿರುವ ಬಸವ ಭವನ ಪೂರ್ಣಗೊಳಿಸಲು ಮುಖ್ಯಮಂತ್ರಿಗಳಿಂದ ಅಗತ್ಯ ಅನುದಾನ ಕಲ್ಪಿಸಲು ಶ್ರಮಿಸುತ್ತೇನೆ ಎಂದು ಹೇಳಿದರು. ಮೈಮುಲ್ ನಿರ್ದೇಶಕಿ ಮಲ್ಲಿಕಾ ರವಿಕುಮಾರ್ ಮಾತನಾಡಿ,ದೊಡ್ಡಸ್ವಾಮೀಗೌಡರು ಹಾಗು ಶಾಸಕ ಡಿ.ರವಿಶಂಕರ್ ಅವರಿಗೆ ಸದಾ ಚಿರ ಋಣಿ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೆಡಗ ನಟರಾಜ್,ಅಖಿಲ ಭಾರತ ವೀರಶೈವ ಲಿಂಗಾಯತಮಹಾಸಭಾದ ತಾಲೂಕು ಅಧ್ಯಕ್ಷ ಕೆಂಪರಾಜ್,ಹಾರಂಗಿ ಮಹಾಮಂಡಲದ ನೂತನ ನಿರ್ದೇಶಕ ಅಂಕನಹಳ್ಳಿ ಯತೀಶ್,ಗ್ರಾ.ಪಂ. ಸದಸ್ಯ ಗಾಯನಹಳ್ಳಿ ನಟರಾಜ್,ಮುಖಂಡರಾದ ಕುಮಾರಸ್ವಾಮಿ,ಹೊನ್ನೇನಹಳ್ಳಿ ಗಿರೀಶ್, ಲಿಂಗಪ್ಪ, ಜಗದೀಶ್,ಚಂದ್ರಶೇಖರ,ಎಲ್.ಪಿ.ರವಿಕುಮಾರ್, ತೇಜೋಮೂರ್ತಿ ಸೇರಿದಂತೆ ಇತರರು ಇದ್ದರು