ಯಳಂದೂರು: ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷರಾಗಿ ಜಿ.ಎಂ. ಮಹದೇವಪ್ಪ ಅವಿರೋಧವಾಗಿ ಈಚೆಗೆ ಪಟ್ಟಣದ ಕಾರಾಪುರ ವಿರಕ್ತ ಮಠದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಈ ಚುನಾವಣೆಯಲ್ಲಿ ಜಿ.ಎಂ. ಮಹದೇವಪ್ಪ ಹೊರತುಪಡಿಸಿ ಬೇರೆಯವರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಎಸ್. ಸಿದ್ದಲಿಂಗಸ್ವಾಮಿ ಇವರ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹದೇವಪ್ಪ, ಮಹಾಸಭಾದ ನಿಯಮಗಳಿಗನುಸಾರವಾಗಿ ಜನಸಾಮಾನ್ಯರ ಸೇವೆ ಮಾಡಿ, ಸಮಾಜದಲ್ಲಿ ಶಿಕ್ಷಣ, ಸಂಘಟನೆ ಅಭಿವೃದ್ಧಿಗೆ ಅಧ್ಯತೆ ನೀಡಿ ನಮ್ಮ ತಾಲೂಕು ಸಂಘವನ್ನು ಉತ್ತವಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರು, ನಿರ್ದೇಶಕರ ಸಹಯೋಗದೊಂದಿಗೆ ಪ್ರಮಾಣಿಕವಾಗಿ ದುಡಿಯುತ್ತೇನೆ ಎಂದರು.
ಸಂಘದ ನಿರ್ದೇಶಕರಾಗಿ ವಿ. ರಮೇಶ್, ರೇವಣ್ಣ, ಎಂ. ಮಂಜು, ಎಸ್. ನಾಗಪ್ಪ, ಎಸ್. ಮಹದೇವಸ್ವಾಮಿ, ಬಿ.ಪಿ. ನಾಗೇಂದ್ರಸ್ವಾಮಿಯವನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ವೀರಶೈವ ಮುಖಂಡರು ಸೇರಿದಂತೆ ಇತರರು ಹಾಜರಿದ್ದರು.