ಕುಂದಾಪುರ: ಶ್ರೀ ಮಾತಾ ಆಸ್ಪತ್ರೆಯ ಮಾಲಕ ಡಾ.ಸತೀಶ್ ಪೂಜಾರಿ (೫೪) ಹೃದಯಾಘಾತದಿಂದ ಕೋಟತಟ್ಟು ಮಣೂರಿನ ಸ್ವಗೃಹದಲ್ಲಿ ಇಂದು ಗುರುವಾರ ಬೆಳಗ್ಗೆ ನಿಧನರಾದರು.
ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯಲ್ಲಿ ಮಾಲೀಕರಾಗಿದ್ದ ಇವರು ಕಲಾವಿದರೂ ಅಗಿದ್ದರು. ಜನಪ್ರಿಯ ವೈದ್ಯರಾಗಿದ್ದ ಡಾ ಸತೀಶ್ ಅತ್ಯುತ್ತಮ ಗಾಯಕರಾಗಿದ್ದು, ಅನೇಕ ಸಂಗೀತ ವೀಡಿಯೊಗಳನ್ನು ಹೊರತಂದಿದ್ದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.