Tuesday, April 22, 2025
Google search engine

Homeಅಪರಾಧಕಾನೂನುಅಕ್ರಮ ಆಸ್ತಿ ಗಳಿಕೆ: ದಾವಣಗೆರೆಯ 8 ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಅಕ್ರಮ ಆಸ್ತಿ ಗಳಿಕೆ: ದಾವಣಗೆರೆಯ 8 ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ದಾವಣಗೆರೆ: ಕೆಪಿಟಿಸಿಇಎಲ್ ಇಇ ಡಿ.ಎಚ್‌. ಉಮೇಶ್,‌ ಎಎಇಇ ಪ್ರಭಾಕರ್ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಬಗ್ಗೆ ದೂರುದಾರರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಒಟ್ಟು ಎಂಟು ಕಡೆ ದಾವಣಗೆರೆ ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆದಿದೆ.

ದಾವಣಗೆರೆಯಲ್ಲಿರುವ ಉಮೇಶ್ ಅವರ ಭವ್ಯ ಬಂಗಲೆ, ದಾವಣಗೆರೆ ನಗರದ ಎರಡನೇ ಹಂತದ ಶಿವಕುಮಾರಸ್ವಾಮಿ ಬಡಾವಣೆ, ಹಂತದಲ್ಲಿರುವ ಮನೆ, ಲೋಕಾಯುಕ್ತ ಪಿಐಎಚ್.ಎಸ್. ರಾಷ್ಟ್ರಪತಿ ಆವರಗೆರೆಯಲ್ಲಿರುವ ಹೊಸ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿ ಲೋಕಾಯುಕ್ತ ಪಿಐ ಸಂಗಮೇಶ್ ದಾವಣಗೆರೆ ನಗರದಲ್ಲಿರುವ ಕೆಐಎಡಿಬಿ ಉಗ್ರಾಣದ ಮೇಲೆ ದಾಳಿ ನಡೆಸಿದ್ದಾರೆ.

ದಾವಣಗೆರೆ ಬೆಸ್ಕಾಂ ವಿಜಿಲೆನ್ಸ್ ಅಧಿಕಾರಿ ಎಇಇ ಪ್ರಭಾಕರ್ ಮನೆಯ ಮೇಲೂ ದಾಳಿ ನಡೆಸಲಾಗಿದೆ. ದಾವಣಗೆರೆ ಡಿಎಸ್ಪಿ ಕಲಾವತಿ ಗದಗ ಪಿಐ ಪುರುಷತ್ತೋಮ ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ 13 ಮೇನ್ ನಲ್ಲಿರುವ ವಾಸದ ಮನೆ, ಹಾವೇರಿ ಡಿಎಸ್ಪಿ ಬಿ.ಪಿ.ಚಂದ್ರಶೇಖರ್ ದಾವಣಗೆರೆ ನಗರದ ತರಳಬಾಳು ಬಡಾವಣೆಯಲ್ಲಿರುವ ಮಾವನ ಮನೆ ಬಳ್ಳಾರಿ ಲೋಕಾಯುಕ್ತ ಮಹಮ್ಮದ್ ರಫೀಕ್ ದಾವಣಗೆರೆ ಬೆಸ್ಕಾಂ ವಿಜಿಲೆನ್ಸ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular