Sunday, April 20, 2025
Google search engine

Homeರಾಜ್ಯಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಒಂದು ವಿಶ್ವವಿದ್ಯಾನಿಲಯವಿದ್ದಂತೆ: ರೋ. ಎಂಪಿಎಚ್ ಎಫ್ ಬಿ.ಶೇಖರ್ ಶೆಟ್ಟಿ

ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಒಂದು ವಿಶ್ವವಿದ್ಯಾನಿಲಯವಿದ್ದಂತೆ: ರೋ. ಎಂಪಿಎಚ್ ಎಫ್ ಬಿ.ಶೇಖರ್ ಶೆಟ್ಟಿ

ಹುಣಸೂರು: ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಒಂದು ವಿಶ್ವವಿದ್ಯಾನಿಲಯವಿದ್ದಂತೆ, ಎಂದು ಪದಗ್ರಹಣ ಅಧಿಕಾರಿ ರೋ. ಎಂಪಿಎಚ್ಎಫ್  ಬಿ.ಶೇಖರ್ ಶೆಟ್ಟಿ ಬಣ್ಣಿಸಿದರು.

ಹುಣಸೂರು ರೋಟರಿ ಸಂಸ್ಥೆಯ  2024-25. ನೇ ಸಾಲಿನ  ನೂತನ  ಅಧ್ಯಕ್ಷ, ಕೆ.ಪಿ. ಪ್ರಸನ್ನ, ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್ ಹಾಗೂ  ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು,

ರೋಟರಿ ಸಂಸ್ಥೆಯ ಸೇವೆ, ಒಡನಾಟ,  ಪ್ರೀತಿ, ಸ್ನೇಹ, ತ್ಯಾಗ, ಸಮಗ್ರತೆ, ಏಕತೆ,  ನಾಯಕತ್ವಕ್ಕೆ ಮತೊಂದು ಹೆಸರೇ ರೋಟರಿ ಸಂಸ್ಥೆ. ಕಟ್ಟ ಕಡೆಯ ಹಾಗೂ ಮುಂದಿನ ಪೀಳಿಗೆಯ ವ್ಯಕ್ತಿಗೂ ಸೇವೆ ಸಲ್ಲಿಸುವ ಅವಕಾಶ ನೀಡುವುದು, ರೋಟರಿ ಸಂಸ್ಥೆಯ ಧ್ಯೇಯವಾಗಿದೆ.

ಈ ಸಂಸ್ಥೆ ವಿಶ್ವ ಬಾತೃತ್ವ ಸಮಗ್ರತೆ, ಏಕತೆ, ವೈವಿಧ್ಯತೆಯೆ ರೋಟರಿಯ ವಿಶೇಷ, ಪ್ರಪಂಚದಾದ್ಯಂತ  .1.2  ಮಿಲಿಯನ್,  ಭಾರತದಲ್ಲಿ 1.40 ಲಕ್ಷ ಸದಸ್ಯರಿರುವ ವಿಶ್ವದ ದೊಡ್ಡ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯ ಸದಸ್ಯರಾಗಿರುವುದೇಂದರೆ ಹೆಮ್ಮೆಯ ವಿಷಯವೆಂದರು.

ಹುಣಸೂರು ರೋಟರಿ ಸಂಸ್ಥೆಯು ತನ್ನ ಅತ್ಯುತ್ತಮ ಕಾರ್ಯಗಳಿಂದ ಪ್ಲಾಟಿನಂ ಪ್ರಶಸ್ತಿ ಪಡೆದಿರುವುದು ಅದ್ಭುತ ಸಾಧನೆ. ಮುಂದಿಯೂ ಕಾಪಾಡಿಕೊಳ್ಳಿ ಎಂದು ಶ್ಲಾಘಿಸಿದರು.

ಅಧಿಕಾರ ಸ್ವೀಕರಿಸಿದ ರೋಟರಿ ಕೆ.ಪಿ.ಪ್ರಸನ್ನ, ಮಾತನಾಡಿ, ನಾನು ಸರಕಾರಿ ಅಧಿಕಾರಿಯಾಗಿದ್ದರು ರೋಟರಿ ಸೇವೆ, ಸ್ನೇಹ ಬಂಧನಕ್ಕೆ ಮನಸೋತು ಅಳಿಲು ಸೇವೆಯ ಮಾಡಲು ರೋಟರಿಗೆ ಬಂದಿದ್ದು, ಜಿವನದ ಅಂತ್ಯದವರೆಗೂ ರೋಟರಿ ಸೇವೆಗೆ ಮುಡುಪಾಗಿರುವೆ ಎಂದರು.

ರೊ. ಕಾರ್ಯದರ್ಶಿ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ತಾಲೂಕು ಕೇಂದ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ, ಆರೋಗ್ಯ, ಹಸಿವು ನಿರ್ಮುಲನೆಗಾಗಿ ಸೇವೆ ಎಂಬ ಧ್ಯೇಯ ವಿಟ್ಟುಕೊಂಡು ಇಡೀ ವಿಶ್ವದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಏಕೈಕ  ಸಂಸ್ಥೆ ರೋಟರಿಯಾಗಿದೆ ಎಂದರು.

ನಿಕಟಪೂರ್ವ ಅಧ್ಯಕ್ಷ ಚೆನ್ನಕೇಶವ, ಕಾರ್ಯದರ್ಶಿ ಪ್ರಸನ್ನ   2023-24 ನೇ ಸಾಲಿನ ವರದಿ ಮಂಡಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಗವರ್ನರ್   ಆರ್.ಆನಂದ್, ವಲಯ 6 ರ ಸೇನಾನಿ ಮೀನುಮನೆ  ಪಾಂಡುಕಯಮಾರ್. ಪಿ .ಇನ್ನಾರ್ ವೀಲ್ ಅಧ್ಯಕ್ಷೆ ಸ್ಮಿತ, ರೋ.ಸತ್ಯನಾರಾಯಣ್, ಹಿರಿಯ. ಸಹಾಯಕ ಗವರ್ನರ್ ಡಾ. ಹರಿ ಶೆಟ್ಟಿ, . ಸದಸ್ಯರಾದ ಡಾ.ಸರೋಜಿನಿ ವಿಕ್ರಮ್, ಡಾ.ರವಿಕುಮಾರ್, ಡಾ.ವೃಷೇಂದ್ರಸ್ವಾಮಿ, ರೊ.ರಾಜಶೇಖರ್,  ಡಾ.ರಘು, ಹಾಗೂ ರೊ.ಧರ್ಮಾಪುರ ನಾರಾಯಣ್ ತಂಗಮರಿಯಪ್ಪನ್,   ಜಿ.ವಿ.ಶ್ರೀ ನಾಥ್, ಶ್ಯಾಮ್, ರವೀಶ್, ಇದ್ದರು.

RELATED ARTICLES
- Advertisment -
Google search engine

Most Popular