ಮಂಡ್ಯ: ವಿಶ್ವ ಮಲೇರಿಯಾ ದಿನಾಚರಣೆ ಮತ್ತು ಡೆಂಘೀ ವಿರೋಧ ಮಾಸಾಚರಣೆ ಹಿನ್ನಲೆ ಜಿ.ಪಂ, ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಮಲೇರಿಯಾ ಮತ್ತು ಡೆಂಘೀ ನಿಯಂತ್ರಣ ಕುರಿತು ಕಾರ್ಯಾಗಾರವನ್ನು ಮಂಡ್ಯದ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ರೋಗ ನಿಯಂತ್ರಣಾಧಿಕಾರಿ ಡಾ.ಕಾಂತರಾಜ್ ನೇತೃತ್ವದಲ್ಲಿ ಮಲೇರಿಯಾ ಮತ್ತು ಡೆಂಘೀ ನಿಯಂತ್ರಣಕ್ಕೆ ಅಡ್ವೋಕೆಸಿ ಕಾರ್ಯಾಗಾರ ನಡೆಸಲಾಯಿತು.
ನಂತರ ಮಾತನಾಡಿದ ಅವರು, ಮಲೇರಿಯಾ ನಿಯಂತ್ರಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ಹೊರ ರಾಜ್ಯದಿಂದ ಬಂದವರಿಂದಲೂ ಮಲೇರಿಯಾ ರೋಗ ಹರಡುವ ಸಾಧ್ಯತೆ ಇದೆ. ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ರೋಗ ಬರುತ್ತದೆ. ಪೈಲೇರಿಯಗೂ (ಆನೆಕಾಲು ರೋಗ) ಚಿಕಿತ್ಸೆ ಕೊಡಲಾಗುತ್ತಿದೆ. ಮಲೇರಿಯಾ ರೋಗಕ್ಕೆ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ 2024 ರಲ್ಲಿ 10 ಫೈಲಿರಿಯಾ(ಆನೆಕಾಲುರೋಗ) ವರದಿಯಾಗಿದೆ. ಜನರು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಹೆಣ್ಣು ಸೊಳ್ಳೆಗಳಿಂದ ಮಲೇರಿಯಾ ರೋಗ ಹರಡುತ್ತದೆ. ಉಪಯೋಗಕ್ಕೆ ಬಾರದ ವಸ್ತುಗಳಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು. ಡೇಂಘಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಮಳೆ ಬಿಟ್ಟು ಬಿಟ್ಟು ಬರ್ತಿದೆ, ನೀರು ಅಲ್ಲಲ್ಲೇ ನಿಂತು ಲಾರವದಿಂದ ಸೊಳ್ಳೆ ಉತ್ಪತ್ತಿಯಾಗಿ ಡೇಂಘಿ ಹರಡುವ ಸಾಧ್ಯತೆ ಇದೆ. ಫ್ರೀಡ್ಜ್, ಡ್ರಮ್ ಗಳಲ್ಲಿ ನೀರು ಖಾಲಿ ಮಾಡಿ, ನೀರು ನಿಲ್ಲದಾಗೆ ನೋಡಿಕೊಳ್ಳಬೇಕು. ಸೊಳ್ಳೆಗಳಿಂದ ಡೇಂಘಿ, ಚಿಕುಂಗುನ್ಯ, ಝೀಕಾ ರೋಗ ಬರುತ್ತದೆ. ಡೇಂಘಿ ಲಕ್ಷಣಗಳು, ಕಣ್ಣಿನಲ್ಲಿ ನೋವು, ತೀವ್ರ ಜ್ವರ, ತಲೆನೋವು, ಲಕ್ಷಣ ಕಂಡು ಬರುತ್ತದೆ. ಯಾರು ಸಹ ಉದಾಸೀನ ಮಾಡದೆ ತಕ್ಷಣವೇ ಚಿಕಿತ್ಸೆ ಪಡೆಯಿರಿ. ಸೊಳ್ಳೆಗಳ ನಿಯಂತ್ರಣದಲ್ಲಿ ಸಾರ್ವಜನಿಕ ಪಾತ್ರ ಅತಿ ಮುಖ್ಯ ಎಂದರು.
ಕಾರ್ಯಗಾರದಲ್ಲಿ ಆರೋಗ್ಯ ಮೇಲ್ವಿಚಾರಕ ಸೋಮಶೇಖರ್ ಭಾಗಿಯಾಗಿದ್ದರು.