Saturday, April 19, 2025
Google search engine

Homeಅಪರಾಧಸಿಎಂ ಸಿದ್ದರಾಮಯ್ಯ ಆಪ್ತನೆಂದು ಹೇಳಿಕೊಂಡು ಬಾಗಲಕೋಟೆ ಡಿಹೆಚ್​ಓಗೆ 7 ಲಕ್ಷ ರೂ. ವಂಚನೆ

ಸಿಎಂ ಸಿದ್ದರಾಮಯ್ಯ ಆಪ್ತನೆಂದು ಹೇಳಿಕೊಂಡು ಬಾಗಲಕೋಟೆ ಡಿಹೆಚ್​ಓಗೆ 7 ಲಕ್ಷ ರೂ. ವಂಚನೆ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಅಂತ ಹೇಳಿಕೊಂಡು ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಜಯಶ್ರೀಗೆ ಏಳು ಲಕ್ಷ ರೂ. ವಂಚಿಸಿದ್ದಾನೆ.

ರಾಮಯ್ಯ ವಂಚಿಸಿದ ಆರೋಪಿ. 2023ರ ಸೆಪ್ಟೆಂಬರ್​ ತಿಂಗಳಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಹುದ್ದೆಗೆ ಕಿತ್ತಾಟ ನಡೆದಿತ್ತು. ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಹುದ್ದೆಗಾಗಿ ಜಯಶ್ರೀ ಎಮ್ಮಿ ಹಾಗೂ ಶಾಸಕ ಹೆಚ್​ವೈ ಮೇಟಿ ಅಳಿಯ ರಾಜ್ ​ಕುಮಾರ್​ ಮಧ್ಯೆ ಜಟಾಪಟಿ‌ ನಡೆದಿತ್ತು. ಒಂದು ದಿನ ಬೆಳಗ್ಗೆ ರಾಜ್​ಕುಮಾರ್ ಯರಗಲ್ ಡಿಹೆಚ್ ​ಓ ಕುರ್ಚಿಯಲ್ಲಿ ಕೂತಿದ್ದರು.

ತಮ್ಮ ಕುರ್ಚಿಯಲ್ಲಿ ಕೂತಿದ್ದ ರಾಜ್ ​ಕುಮಾರ್ ಯರಗಲ್ ಅವರನ್ನು ಕಂಡಿದ್ದ ಜಯಶ್ರೀ ಕುರ್ಚಿ ಬಿಟ್ಟುಕೊಡುವಂತೆ ಹೇಳಿದ್ದರು. ಆದರೆ ರಾಜ್ ​ಕುಮಾರ್ ಯರಗಲ್ ಕುರ್ಚಿ ಬಿಟ್ಟು ಕೊಡಲಿಲ್ಲ. ಬದಲಿಗೆ “ಇಂದಿನಿಂದ ನಾನೇ ಡಿಹೆಚ್​ಓ ಸರ್ಕಾರದಿಂದ ಆದೇಶ ತಂದಿದ್ದೇನೆಂದು” ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಕೆಲಕಾಲ ವಾಗ್ವಾದ ನಡೆದಿತ್ತು.

ಬಳಿಕ ಜಯಶ್ರೀ ತಮ್ಮ ವರ್ಗಾವಣೆ ತಡೆಯಾಜ್ಞೆ ತರಲು ಹಿರಿಯ ಅಧಿಕಾರಿಗಳ ಭೇಟಿಗೆ ಬೆಂಗಳೂರಿಗೆ ಬಂದಿದ್ದಾರೆ. ಹೀಗೆ ಬಂದ ವೇಳೆ, ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಆಪ್ತನೆಂದು ರಾಮಯ್ಯ ಎಂಬಾತ ಪರಿಚಯನಾಗಿದ್ದನು. ರಾಮಯ್ಯ ತಾನು ಕೆಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದನು. ಆಗ ಜಯಶ್ರೀ ಆತನಿಗೆ ನಡೆದ ಸಂಗತಿ ಹೇಳಿದ್ದಾಳೆ. ನಂತರ ರಾಮಯ್ಯ ನಾನು ಸಮಸ್ಯೆ ಬಗೆ ಹರಿಸುತ್ತೇನೆ 50 ಸಾವಿರ ರೂ. ನೀಡಿ ವಿವಾದ ಸರಿಪಡಿಸುವುದಾಗಿ ಹೇಳಿದ್ದಾನೆ. ಬಳಿಕ ಹಂತ ಹಂತವಾಗಿ ಒಟ್ಟು 7 ಲಕ್ಷ ರೂ. ಹಣ ರಾಮಯ್ಯ ಪಡೆದಿದ್ದಾನೆ.

ನಂತರ ಆರೋಪಿ ರಾಮಯ್ಯ ಡಿಹೆಚ್​ಓ ಜಯಶ್ರೀ ಸಂಪರ್ಕಕ್ಕೆ ಸಿಕ್ಕಿಲ್ಲ. ಬಳಿಕ ಡಿಹೆಚ್ ​ಓ ಜಯಶ್ರೀ ವಂಚನೆ ಬಗ್ಗೆ ಬೆಂಗಳೂರು ಸಿಸಿಬಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular