Saturday, April 19, 2025
Google search engine

Homeಅಪರಾಧಡಿವೈಡರ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ: ಚಾಲಕ ಸಾವು

ಡಿವೈಡರ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ: ಚಾಲಕ ಸಾವು

ರಾಯಚೂರು: ಕೆಎಸ್‌ಆರ್‌ಟಿಸಿ ಸ್ಲೀಪರ್ ಕೋಚ್ ಬಸ್ ಅಪಘಾತದಲ್ಲಿ ಬಸ್ ಚಾಲಕ/ನಿರ್ವಾಹಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಇಂದು(ಶುಕ್ರವಾರ) ಬೆಳಗಿನ ಜಾವ ನಡೆದಿದೆ.

ಬಸ್ ಚಾಲಕ/ನಿರ್ವಾಹಕ ರಾಚಪ್ಪ (51)ಮೃತ ದುರ್ದೈವಿಯಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಅಪಘಾತಕ್ಕೀಡಾದ KSRTC ಬಸ್ ಹುಬ್ಬಳ್ಳಿಯಿಂದ ರಾಯಚೂರಿನತ್ತ ಬರುತ್ತಿತ್ತು ಎಂದು ತಿಳಿದು ಬಂದಿದೆ. ಬಸ್ ನಲ್ಲಿ 9 ಜನ ಪ್ರಯಾಣಿಕರಿದ್ದು, ಓರ್ವರಿಗೆ ಮಾತ್ರ ಗಾಯವಾಗಿದೆ. ಈ ಸಂಬಂಧ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular