Saturday, April 19, 2025
Google search engine

Homeಸ್ಥಳೀಯಆಲೂರು ವೆಂಕಟರಾಯರ ಕೊಡುಗೆ ಅಪಾರ:ಡಿ ಟಿ ಪ್ರಕಾಶ್

ಆಲೂರು ವೆಂಕಟರಾಯರ ಕೊಡುಗೆ ಅಪಾರ:ಡಿ ಟಿ ಪ್ರಕಾಶ್

ಮೈಸೂರು: ಕರ್ನಾಟಕದ ಏಕೀಕರಣಕ್ಕೆ ಆಲೂರು ವೆಂಟಕರಾಯರ ಕೊಡುಗೆ ಅಪಾರವಾಗಿದ್ದು ನಾಡಿನ ಗತ ವೈಭವದ ಬಗ್ಗೆ ತಿಳಿಸಿಕೊಡುವುದರ ಜೊತೆಗೆ ಏಕೀಕರಣದ ಕಿಚ್ಚನ್ನು ಹತ್ತಿಸಿ ಬಡಿದೆಬ್ಬಿಸಿದ ಕೀರ್ತಿ ಸಲ್ಲುತ್ತದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ತಿಳಿದರು

ನಗರದ ಚಾಮುಂಡಿಪುರಂ ವೃತ್ತದಲ್ಲಿರುವ ರಾಮಚಂದ್ರರಾವ್ ಉದ್ಯಾನವನದಲ್ಲಿ ಆಯೋಜಿಸಿದ್ದ ಆಲೂರು ವೆಂಕಟರಾಯರ 144 ನೇ ಜನುಮದಿನ ಆಚರಣೆಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟಿ ಮಾತನಾಡಿದರು.

ಏಕೀಕರಣಕ್ಕೂ ಮೊದಲ ಕರ್ನಾಟಕ ರಾಜ್ಯ ಹೈದರಾಬಾದ್‌ ಕರ್ನಾಟಕ ಮುಂಬೈ ಕರ್ನಾಟಕ, ಮದ್ರಾಸ್‌ ಕರ್ನಾಟಕಗಳಲ್ಲಿ ಹರಿದು ಹಂಚಿ ಹೋಗಿತ್ತು. ಅದರಂತೆ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚಾಗಿ ಮರಾಠಿ ಶಿಕ್ಷಣ ನೀಡಲಾಗುತ್ತಿತ್ತು. ಇದನ್ನು ಮನಗಂಡ ವೆಂಕಟರಾಯರು ಏಕೀಕರಣ ಚಳವಳಿ ನಡೆಸಲು ತಮ್ಮ ಶಾಲಾ ವಿದ್ಯಾರ್ಥಿ ಸಮಯದಲ್ಲೇ ಮುಂದಾಗಿದ್ದರು.ನಾಡಿನಲ್ಲಿ ರಾಜ್ಯದ ಒಗ್ಗೂಡಿಕೆಗೆ ಪೂರಕ ಕಾರ್ಯಕ್ರಮ ನಡೆಸಿದರು ಎಂದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ ಮಾತನಾಡಿ ವೆಂಕಟರಾಯರು ರಾಷ್ಟ್ರೀಯ ಶಾಲೆ ಪ್ರಾರಂಭಿಸಿ ಕನ್ನಡಿಗರಿಗೆ ಸ್ವ ಉದ್ಯೋಗ ಮಾಡುವ ಅವಕಾಶ ಮಾಡಿಕೊಟ್ಟಿದ್ದರು. ಕರ್ನಾಟಕ ಏಕೀಕರಣ ಪರಿಷತ್‌ ಮೂಲಕ ಕರ್ನಾಟಕದ ಏಕೀಕರಣ ಮಾಡುವ ಮಹತ್ಕಾರ್ಯ ಮಾಡಿದ್ದರು. ತಮ್ಮ ಬಹುಮುಖ ವ್ಯಕ್ತಿತ್ವದ ಮೂಲಕ ಕನ್ನಡಿಗರನ್ನು ಒಂದುಗೂಡಿಸುವ ಕೆಲಸ ಮಾಡಿದ್ದಾರೆಂದರು.

ಮಾಜಿನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ್ ಮಾತನಾಡಿ ಕನ್ನಡದ ಮಹಾನ್ ಚೇತನ ,ಕನ್ನಡ ಕನ್ನಡಿಗ ಕರ್ನಾಟಕ ಇರುವತನಕ ಮರೆಯದ ಮರೆಯಲಾಗದ ವ್ಯಕ್ತಿತ್ವ ,25ಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದ ಆಲೂರು ವೆಂಕಟರಾಯರು ಬಾಲಗಂಗಾಧರ ತಿಲಕರ ಗೀತಾ ರಹಸ್ಯವನ್ನ ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯಕ್ಕೆ ಘನತೆ ಗೌರವ ತಂದುಕೊಟ್ಟವರು ಎಂದರು. ಹಿರಿಯ ಸಾಹಿತಿಗಳಾದ ಪುಷ್ಪ ಅಯ್ಯಂಗಾರ್ ಮಾತನಾಡಿದರು

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ಹಿರಿಯ ಸಾಹಿತಿಗಳಾದ ಪುಷ್ಪ ಅಯ್ಯಂಗಾರ್, ಮಾಜಿನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮಪ್ರಸಾದ್ , ಜೆಡಿಎಸ್ ಕಾರ್ಯದಕ್ಷ ಪ್ರಕಾಶ್ ಪ್ರಿಯದರ್ಶನ್, ಸಮಾಜ ಸೇವಕರಾದ ವಿದ್ಯಾ, ವೈದೇಹಿ, ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ನಾಗಶ್ರೀ ಸುಚಿಂದ್ರ, ಸುಚಿಂದ್ರ, ಚಕ್ರಪಾಣಿ, ಬೈರತಿ ಲಿಂಗರಾಜು, ರಾಘವೇಂದ್ರ, ಸೇತುರಾಮ್, ಮಿರ್ಲೆ ಪನೀಶ್, ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular