Sunday, April 20, 2025
Google search engine

Homeರಾಜ್ಯಒಂದು ದೇಶವು ಪ್ರಗತಿಯಾಗಬೇಕಾದರೆ ಮಾನವ ಸಂಪನ್ಮೂಲ ಅತ್ಯಗತ್ಯ: ಡಾ.ಎಲ್.ಎಂ ಪೂಜಾ

ಒಂದು ದೇಶವು ಪ್ರಗತಿಯಾಗಬೇಕಾದರೆ ಮಾನವ ಸಂಪನ್ಮೂಲ ಅತ್ಯಗತ್ಯ: ಡಾ.ಎಲ್.ಎಂ ಪೂಜಾ

ವರದಿ: ಚಪ್ಪರದಹಳ್ಳಿ ವಿನಯ್ ಕುಮಾರ್

ಬೆಟ್ಟದಪುರ: ಒಂದು ದೇಶವು ಪ್ರಗತಿಯಾಗಬೇಕಾದರೆ ಅದಕ್ಕೆ ಮಾನವ ಸಂಪನ್ಮೂಲವು ಅತ್ಯಗತ್ಯ. ಆದರೆ ದೇಶವು ಅಭಿವೃದ್ಧಿಯಾಗುವ ಬದಲು ಜನಸಂಖ್ಯೆಯೇ ಹೆಚ್ಚಾದರೆ ಗಂಭೀರ ಸಮಸ್ಯೆಗಳು ಎದುರಾಗುತ್ತದೆ ಎಂದು ಭುವನಹಳ್ಳಿ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಲ್.ಎಂ ಪೂಜಾ ಹೇಳಿದರು.

 ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಭುವನಹಳ್ಳಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಜಾಗತಿಕ ಜನಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಈ ಜನಸಂಖ್ಯೆ ಹೆಚ್ಚಳವು ಮನುಕುಲಕ್ಕೆ ಆರೋಗೂ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಗಂಭೀರ ಸಮಸ್ಯೆಯಾಗಿ ಪರಿಣಮಿಸುವುದು ಮಾತ್ರ ಖಂಡಿತ. ಜನಸಂಖ್ಯಾ ಹೆಚ್ಚಳದಿಂದ ಪರಿಹರಿಸಲಾಗದ ಹಲವಾರು ತೊಂದರೆಗಳು ಇಡೀ ವಿಶ್ವಕ್ಕೆ ಎದುರಾಗುತ್ತದೆ ಎಂದರು.

 ಅರೋಗ್ಯ ಸುರಕ್ಷಾಧಿಕಾರಿ ಕೆ.ಆರ್ ಶಶಿ ಮಾತನಾಡಿ ಜನಸಂಖ್ಯೆಯನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ಅರೋಗ್ಯ ಇಲಾಖೆಯೂ ಕೂಡ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರವು ಮೂಲಕ ಅರಿವು ಮೂಡಿಸುತ್ತಿದೆ. ಹೀಗೆ ಜನಸಂಖ್ಯೆ ಏರಿಕೆಯಾಗುತ್ತ ಹೋದರೆ ಜನಸಂಖ್ಯೆಯನ್ನು ನಿಯಂತ್ರಿಸುವುದು ಕಷ್ಟವಾಗುವುದಂತೂ ಖಂಡಿತ. ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ ಎಂದರು.

 ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಪುನೀತ್ ಕುಮಾರ್, ಆಶಾ ಕಾಯ೯ಕತೆ೯ಯರಾದ ಶೋಭ, ಯಶೋಧ ಮತ್ತು ಸ್ಥಳೀಯರು ಇದ್ದರು.

RELATED ARTICLES
- Advertisment -
Google search engine

Most Popular