ಮಂಡ್ಯ: ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ 2 ನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಶಿವಲಿಂಗೇಗೌಡ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷೆ ಸುನಂದಮ್ಮ ಸಿದ್ದರಾಮುರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿವಲಿಂಗೇಗೌಡ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಶಿವಲಿಂಗೇಗೌಡ ಅವಿರೋಧ ಆಯ್ಕೆಯಾಗಿದ್ದಾರೆ.
2 ನೇ ಬಾರಿಗೆ ಪಿಎಲ್ ಡಿ ಬ್ಯಾಂಕಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆ ನೂತನ ಅಧ್ಯಕ್ಷರನ್ನ ಬ್ಯಾಂಕಿನ ಉಪಾಧ್ಯಕ್ಷರು, ನಿರ್ದೇಶಕರು, ವ್ಯವಸ್ಥಾಪಕರು ಅಭಿನಂದಿಸಿದ್ದಾರೆ.
ಪಿಎಲ್ ಡಿ ಬ್ಯಾಂಕಿನ ಉಳಿದ ಅವಧಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಎಲ್ಲಾ 16 ಮಂದಿ ನಿರ್ದೇಶಕರು ಜೊತೆಗೂಡಿ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾಗಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಬ್ಯಾಂಕಿನ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರ ಜೊತೆಗೂಡಿ ಬ್ಯಾಂಕಿನಲ್ಲಿ ‘ರೈತರ ಭವನ’ ಕಟ್ಟಡ ನಿರ್ಮಾಣ ಮಾಡಲು ಬದ್ದನಾಗಿದ್ದೇನೆ ಎಂದು ಅಧ್ಯಕ್ಷ ಶಿವಲಿಂಗೇಗೌಡ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬೇಲೂರು ಸೋಮಶೇಖರ್, ಉಪಾಧ್ಯಕ್ಷ ಎಂ.ಪ್ರಕಾಶ, ನಿರ್ದೇಶಕರಾದ ಸಿ.ಎ.ಅರವಿಂದ್, ಟಿ.ಬಿ.ಶಿವಲಿಂಗೇಗೌಡ, ಬಿ.ಎಲ್. ಬೋರೇಗೌಡ,ಸುನಂದಮ್ಮ ಸಿದ್ದರಾಮು, ಮರೀಗೌಡ ಇದ್ದರು.