Sunday, April 20, 2025
Google search engine

Homeಸ್ಥಳೀಯಬೌದ್ಧಿಕ ಸಾಮರ್ಥ್ಯದಲ್ಲಿ ಭಾರತ ಉತ್ತಮ ಸ್ಥಾನದಲ್ಲಿದೆ

ಬೌದ್ಧಿಕ ಸಾಮರ್ಥ್ಯದಲ್ಲಿ ಭಾರತ ಉತ್ತಮ ಸ್ಥಾನದಲ್ಲಿದೆ


ಮೈಸೂರು:
ಬೌದ್ಧಿಕ ಸಾಮರ್ಥ್ಯ(ಐಕ್ಯೂ)ನಲ್ಲಿ ಇತರೆ ದೇಶಗಳಿಗೆ ಹೊಲಿಕೆ ಮಾಡಿದರೆ ಭಾರತ ಉತ್ತಮ ಸ್ಥಾನದಲ್ಲಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿಪ್ರಾಯಪಟ್ಟರು.
ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆಯೋಜಿಸಿದ್ದ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರಪಂಚದ ಬಹುತೇಕ ದೇಶಗಳಲ್ಲಿ ಭಾರತೀಯ ಮೂಲದ ವಿಜ್ಞಾನಿಗಳೇ ಹೆಚ್ಚಿದ್ದಾರೆ. ಯಾವುದೇ ಒಂದು ದೇಶದ ಪ್ರಖ್ಯಾತಿ ಅಲ್ಲಿನ ವಿಜ್ಞಾನಿಗಳು, ಇಂಜಿನಿಯರ್‌ಗಳಿಂದ ಹೆಚ್ಚುತ್ತದೆಯೇ ಹೊರತು ರಾಜಕಾರಣಿಗಳು ಹಾಗೂ ಅಧಿಕಾರಶಾಹಿಗಳಿಂದಲ್ಲ ಎಂದು ಹೇಳಿದರು.
ಕೌಶಲ್ಯ ಎಂಬುದು ಇಂದಿನ ಜಾಗತಿಕ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರಿಗೂ ಅತ್ಯವಶ್ಯಕ. ಯಾರಲ್ಲಿ ಅಪಾರ ಕೌಶಲ್ಯಗಳಿರುತ್ತವೆಯೂ ಅವರು ಮಾತ್ರ ಪ್ರಪಂಚದ ಯಾವುದೇ ದೇಶದಲ್ಲಿ ಬೇಕಾದರೂ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಜಾಗತಿಕ ಮಟ್ಟದಲ್ಲಿ ಆಲೋಚನೆ ಮಾಡಿದಾಗ ಮಾತ್ರ ಇಂದಿನ ಕಾಲದಲ್ಲಿ ಮುಂದೆ ಬರಲು ಸಾಧ ಎಂದು ಹೇಳಿದರು.
ಇಂಗ್ಲೀಷ್ ಭಾಷೆಗೆ ಜಾಗತಿಕ ಮನ್ನಣೆ ಇರುವುದರಿಂದಲೇ ಬಹುತೇಕರು ಆ ಭಾಷೆ ಕಲಿಯಲು ಇಚ್ಛಿಸುತ್ತಾರೆ. ಕಲಿಕೆಗೆ ಯಾವುದೇ ರೀತಿಯ ತಾರತಮ್ಯ ಇರುವುದಿಲ್ಲ. ನಾವು ಪಿಯುಸಿಯನ್ನು ಕನ್ನಡ ಭಾಷೆಯಲ್ಲಿ ಕಲಿತದ್ದರಿಂದ ಬಿಎಸ್‌ಸಿ ಇಂಗ್ಲೀಷ್ ಮಾಧಮಕ್ಕೆ ಪ್ರವೇಶವೇ ಸಿಗಲಿಲ್ಲ. ಆನಂತರ ಎಂಎಸ್‌ಸಿ ಸ್ನಾತಕೋತ್ತರ ತರಗತಿಗಳು ಕನ್ನಡ ಭಾಷೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದರಿಂದ ಸಮಸ್ಯೆ ಎದುರಿಸಬೇಕಾಗಿತ್ತು. ಆದರೆ ಇಂದು ಸಾಕಷ್ಟು ಸಂಸ್ಥೆಗಳಿವೆ. ಅಲ್ಲದೆ ಸರ್ಕಾರಿ ಶಾಲೆಗಳಲ್ಲೂ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಇಂಗ್ಲೀಷ್ ಕಲಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಇಲ್ಲಿಯವರೆಗೆ ನೋಬೆಲ್ ಪ್ರಶಸ್ತಿ ಪಡೆದವರಲ್ಲಿ ಬಹುತೇಕರು ಇಂತಹದ್ದೇ ಸಮಸ್ಯೆಗಳಿಂದ ಬಂದವರು. ಆದರೆ, ಅವರ ಸಾಧನೆಗೆ ಭಾಷೆ ಎಂದೂ ತೊಡಕಾಗಲಿಲ್ಲ. ಇಂತಹ ನೂರಾರು ಸಮಸ್ಯೆಗಳ ನಡುವೆಯೂ ಜಗತ್ತು ಮೆಚ್ಚುವಂತಹ ಸಾಧನೆ ಮಾಡಿದ್ದಾರೆ. ಅಂತವಹವರನ್ನು ಇಂದಿನವರು ಮಾದರಿಯಾಗಿ ತೆಗೆದುಕೊಳ್ಳಬೇಕು. ಇಂಗ್ಲೀಷ್ ಜತೆಗೆ ಕಂಪ್ಯೂಟರ್ ಹಾಗೂ ಕೌಶಲ್ಯಧಾರಿತ ಶಿಕ್ಷಣ ಪಡೆದುಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು. ಮಹಿಳೆಯರ ಶಿಕ್ಷಣಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅದನ್ನು ಬಳಸಿಕೊಂಡು ಉದ್ಯೋಗಸ್ಥರಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಮಣ್ಣ, ನಿವೃತ್ತ ಕುಲಪತಿ ಎಸ್.ಎನ್.ರಾಮೇಗೌಡ, ಪ್ರೊ.ಎಸ್.ಶ್ರೀಕಂಠಸ್ವಾಮಿ ಸೇರಿದಂತೆ ಹಲವರು ಇದ್ದರು.

RELATED ARTICLES
- Advertisment -
Google search engine

Most Popular