ತಿ.ನರಸೀಪುರ : ಧಾರ್ಮಿಕ ಪುಣ್ಯ ಕ್ಷೇತ್ರವಾಗಿರುವ ಮುಡುಕುತೊರೆಯಲ್ಲಿ ನೆನಗುದಿಗೆ ಬಿದ್ದಿರುವ ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಭ್ರಮರಾಂಬ ಶ್ರೀ ಮಲ್ಲಿಕಾರ್ಜನಸ್ವಾಮಿ ದೇವಾಲಯ ನಿರ್ಮಾಣವನ್ನು ಪೂರ್ಣಗೊಳಿಸಲು ಸರ್ಕಾರದಿಂದ ಅಗತ್ಯವಿರುವ ಅನುದಾನವನ್ನು ಮಂಜೂರು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಭರವಸೆ ನೀಡಿದರು.
ತಾಲ್ಲೂಕಿನ ಮುಡುಕುತೊರೆಯಲ್ಲಿ ದೇವಾಲಯ ನಿರ್ಮಾಣ ಕಾಮಗಾರಿಯನ್ನ ಪರಿಶೀಲಿಸಿ, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಮಾಹಿತಿ ಪಡೆದು ಮಾತನಾಡಿದ ಅವರು ಜನರ ಧಾರ್ಮಿಕತೆಯ ಆಚರಣೆ ಮೇಲೆ ಅಪಾರವಾದ ಗೌರವವಿರುವುದರಿಂದ ಶ್ರೀ ಭ್ರಮರಾಂಭ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ದೇವಾಲಯ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿ, ಮಾಹಿತಿಯನ್ನು ಪಡೆದುಕೊಂಡು ದೇವಾಲಯ ನಿರ್ಮಾಣಕ್ಕೆ ಸರ್ಕಾರದ ನೆರವನ್ನು ಕಲ್ಪಿಸುತ್ತೇವೆ ಎಂದು ತಿಳಿಸಿದರು. ದೇವಾಲಯದ ವಿನ್ಯಾಸದ ಬಗ್ಗೆ ಮೆಚ್ಚುಗೆಯಿಂದ ವ್ಯಕ್ತಪಡಿಸಿದ ಮಹದೇವಪ್ಪ ಅವರು ಮೂಲ ಸ್ವರೂಪ, ಹಿಂದಿನ ವಿನ್ಯಾಸದ ಮಾದರಿಯಲ್ಲಿಯೇ ಮುಡುಕುತೊರೆ ದೇವಾಲಯವನ್ನು ನಿರ್ಮಾಣ ಮಾಡಬೇಕು. ಇಂತಹದೊಂದು ಧಾರ್ಮಿಕ ಪುಣ್ಯಕ್ಷೇತ್ರದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಶ್ರೀ ಬ್ರಹ್ಮರಂಭ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ನಿರ್ಮಾಣವನ್ನು ಪೂರ್ಣಗೊಳಿಸಲು ಮಹದೇವಪ್ಪನೇ ಶಾಸಕ ಸಚಿವರಾಗಿ ಆಯ್ಕೆಯಾಗಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಖ್ಯಮಂತ್ರಿಗಳು ಹಾಗೂ ಮುಜರಾಯಿ ಸಚಿವರ ಜೊತೆ ಚರ್ಚಿಸಿ ಕಾಮಗಾರಿ ಯೋಜನಾ ವೆಚ್ಚದ ಅನುದಾನವನ್ನು ಸರ್ಕಾರದಿಂದ ಮಾಡಿಕೊಡುತ್ತೇನೆ ಎಂಬ ಭರವಸೆಯನ್ನು ನೀಡಿದರು. ಲೋಕಪಯೋಗಿ ಸಹಾಯಕ ಇಂಜಿನಿಯರ್ ಶಬರೀಶ್ ಮಾತನಾಡಿ, ದೇವಾಲಯ ನಿರ್ಮಾಣ ಕಾಮಗಾರಿಗೆ ಸುಮಾರು ೪೦ ರಿಂದ ೫೦ ಕೋಟಿ ರೂಗಳ ಅಗತ್ಯವಿದೆ. ಮಲ್ಲಿಕಾರ್ಜುನ ಸ್ವಾಮಿ ಮತ್ತು ಭ್ರಮರಾಂಬ ಅಮ್ಮನವರ ಗುಡಿ ನಿರ್ಮಾಣಕ್ಕೆ ತಲಾ ೮ ಕೋಟಿ ಎಂದು ೧೬ ಕೋಟಿಗೆ ಸರ್ಕಾರ ಮಂಜುಳಾದ ನೀಡಿತ್ತು. ಜಿಲ್ಲಾಧಿಕಾರಿಗಳಿಂದ ದೇವಾಲಯದ ಹಣ ೨.೫೦ ಕೋಟಿ ಅನುದಾನವನ್ನು ಕೂಡ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಮುಂದುವರೆದ ಕಾಮಗಾರಿಗೆ ಸರ್ಕಾರದಿಂದ ಅನುದಾರ ಮಂಜೂರಾದರೆ ಸುಂದರವಾದ ದೇವಾಲಯ ಕಂಗೊಳಿಸಲಿದೆ ಎಂದು ಮಾಹಿತಿ ನೀಡಿದರು.
ಗುತ್ತಿಗೆದಾರ ರಾಜಶೇಖರ್ ಹೆಬ್ಬಾರ್ ಮಾತನಾಡಿ, ಮುಡುಕುತೊರೆಯಲ್ಲಿ ಗಂಗರ ಕಾಲದಲ್ಲಿ ನಿರ್ಮಾಣಗೊಂಡಿರುವ ಪುರಾತನ ಪ್ರಸಿದ್ಧ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವನ್ನು ಚಾಲುಕ್ಯರು ಮತ್ತು ಚೋಳರು ಅವರವರ ಶೈಲಿಯಲ್ಲಿ ಅಭಿವೃದ್ಧಿ ಪಡಿಸಿಕೊಂಡು ಬಂದಿದ್ದರು. ಸರ್ಕಾರದಿಂದ ಯೋಜನಾ ವೆಚ್ಚದ ಅನುದಾನ ಬಿಡುಗಡೆಯಾಗದಿರುವ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ ಎಂದು ತಿಳಿಸಿದರು. ಪರಿಶೀಲನೆಗೂ ಮೊದಲು ಸಚಿವರು ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಭ್ರಮರಾಂಬ ಅಮ್ಮನವರ ದರ್ಶನ ಪಡೆದರು. ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ನಂಜುಂಡಸ್ವಾಮಿ, ಅಭಿವೃದ್ಧಿ ಸಮಿತಿಯ ಸದಸ್ಯರಾದ ಪಿ.ಎಮ್.ಪರಶಿವಮೂರ್ತಿ, ಕೆ.ನಾಗಮ್ಮ, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್, ನಿವೃತ್ತ ಇ ಓ ರಾಜಶೇಖರ್, ಸಹಾಯಕ ಎಂ.ಎಸ್.ವಿಕಾಸ್, ಅರ್ಚಕರಾದ ಎಂ.ಎನ್.ವಿಶ್ವನಾಥ್, ಎಂ.ಡಿ.ಲೋಕೇಶ್, ಗ್ರಾ.ಪಂ ಅಧ್ಯಕ್ಷ ನಾಗರಾಜು, ಸದಸ್ಯ ಸುಂದರ ನಾಯಕ, ಅನಿಲ್ ಬೋಸ್, ತಾ.ಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಸ್ವಾಮಿ, ಮಾಜಿ ಸದಸ್ಯ ಕೂಕ್ಕೂರು ಗಣೇಶ್, ನಿವೃತ್ತ ಮುಖ್ಯ ಇಂಜಿನಿಯರ್ ಎನ್.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ಲೋಕೋಪಯೋಗಿ ಎಇಇ ಸತೀಶ್ ಚಂದ್ರನ್, ಸಹಾಯಕ ಇಂಜಿನಿಯರ್ ಗಳಾದ ಶಿವಸ್ವಾಮಿ, ಮೋಹನ್, ಮುಖಂಡರಾದ ಮೇಗಡಹಳ್ಳಿ ಶಿವಮೂರ್ತಿ, ಮಲ್ಲೇಶ್, ಕುಕ್ಕೂರು ಶಂಬುಲಿಂಗ, ಎಂ.ಎಸ್. ಸಿದ್ದಲಿಂಗಸ್ವಾಮಿ, ಪೂರೀಗಾಲಿ ಅಕ್ಕಿ ಬಸವ ಹಾಗೂ ಇನ್ನಿತರರು ಹಾಜರಿದ್ದರು.