Saturday, April 19, 2025
Google search engine

Homeರಾಜ್ಯಪಶ್ಚಿಮ ಬಂಗಾಳದ ಉಪ ಚುನಾವಣೆ: ತೃಣಮೂಲ ಕಾಂಗ್ರೆಸ್ ಮುನ್ನಡೆ

ಪಶ್ಚಿಮ ಬಂಗಾಳದ ಉಪ ಚುನಾವಣೆ: ತೃಣಮೂಲ ಕಾಂಗ್ರೆಸ್ ಮುನ್ನಡೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಲ್ಕು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದೆ.

ಮಣಿಕ್ತಾಲಾ, ಬಾಗ್ದಾ, ರಣಘಾಟ್ ದಕ್ಷಿಣ ಮತ್ತು ರಾಯ್ಗಂಜ್ ವಿಧಾನಸಭಾ ಸ್ಥಾನಗಳಿಗೆ ಜುಲೈ ೧೦ ರಂದು ಉಪಚುನಾವಣೆ ನಡೆದಿತ್ತು. ಉಪಚುನಾವಣೆಯ ಮತ ಎಣಿಕೆ ಬೆಳಿಗ್ಗೆ ೮ ಗಂಟೆಗೆ ಪ್ರಾರಂಭವಾಗಿದೆ.

ಕೋಲ್ಕತಾದ ಮಣಿಕ್ತಾಲಾ, ದಕ್ಷಿಣ ಬಂಗಾಳದ ರಣಘಾಟ್ ದಕ್ಷಿಣ ಮತ್ತು ಬಾಗ್ದಾ ಮತ್ತು ಉತ್ತರ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ರಾಯ್ಗಂಜ್‌ನಲ್ಲಿ ಟಿಎಂಸಿ ಮುನ್ನಡೆ ಸಾಧಿಸಿದೆ. ೨೦೨೧ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ರಣಘಾಟ್ ದಕ್ಷಿಣ್ ಮತ್ತು ಬಾಗ್ಡಾ,ರಾಯ್ಗಜ್ ಸ್ಥಾನಗಳನ್ನು ಗೆದ್ದಿತ್ತು. ಮಣಿಕ್ತಾಲಾ ಸ್ಥಾನವನ್ನು ೨೦೨೧ ರಲ್ಲಿ ಟಿಎಂಸಿ ಭದ್ರಪಡಿಸಿಕೊಂಡಿತ್ತು.

RELATED ARTICLES
- Advertisment -
Google search engine

Most Popular