ಮಂಡ್ಯ: ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸದಂತೆ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಆಗ್ರಹಿಸಿದ್ದಾರೆ.
ಪಾಂಡವಪುರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿಯನ್ನು ತಮಿಳುನಾಡಿಗೆ ನೀರು ಹರಿಸಬಾರದು. ಒಂದು ವೇಳೆ ನೀರು ಹರಿಸಲು ಮುಂದಾದರೆ ಜಿಲ್ಲೆಯ ರೈತರೊಂದಿಗೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕುಮಾರಸ್ವಾಮಿ ಕಾವೇರಿ ವಿಚಾರದಲ್ಲಿ ಮದ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆ ಹರಿಸಲು ಕೈ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಒಕ್ಕೂಟ ವ್ಯವಸ್ಥೆ ಹಾಗು ಕಾನೂನು ಚೌಕಟ್ಟು ವ್ಯವಸ್ಥೆಯಲ್ಲಿ ಎಚ್ಡಿಕೆ ಸಮಸ್ಯೆ ಬಗೆಹರಿಸುವ ಬಗ್ಗೆ ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಜನರಿಗೆ ತೊಂದರೆ ಆಗದ ರೀತಿ ಕುಮಾರಣ್ಣ ನಡೆದುಕೊಳ್ಳುತ್ತಾರೆ. ಇಲ್ಲಿಯವರೆಗೆ ನಂದೆ ಅಂತಿದ್ದರು ಜಿಲ್ಲೆಯ ಜನ ತೀರ್ಪು ಕೊಟ್ಟ ಮೇಲೆ ಕದ್ದು ಓಡಾಡುತ್ತಿದ್ದಾರೆ ಎಂದು ಚಲುವರಾಯಸ್ವಾಮಿಗೆ ಸಿ ಎಸ್ ಪುಟ್ಟರಾಜು ಟಾಂಗ್ ನೀಡಿದರು.
ಯಾವುದೇ ಕಾರಣಕ್ಕೂ ಕಾವೇರಿ ನೀರನ್ನ ತಮಿಳುನಾಡಿನಗೆ ಬಿಡಬಾರದು. ರೈತರ ಜಮೀನಿನಲ್ಲಿ ನೀರಿಲ್ಲದೆ ತೆಕ್ಕಲು ಬೆಳೆದು ನಿಂತಿದೆ. ಯಾವ ಜವಾಬ್ದಾರಿಯನ್ನು ಯಾರು ನಿರ್ವಹಿಸಬೇಕು ಅನ್ನೋದನ್ನ ಅಂಬೇಡ್ಕರ್ ಸಂವಿಧಾನದಲ್ಲಿ ಬರೆದಿಟ್ಟಿದ್ದಾರೆ. ನಾವು ರೈತರ ಪರ ಇದ್ದೇವೆ ಕೆಲಸ ಮಾಡ್ತೇವೆ. ಕಾನೂನು ಚೌಕಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮೋದಿ ಅವರನ್ನ ಭೇಟಿ ಮಾಡಿ ಕಾವೇರಿ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತಾರೆ. ಜನ ಸಂಪರ್ಕ ಸಭೆಯಲ್ಲಿ ಅಧಿಕಾರಿಗಳು ಬಾರದ ರೀತಿ ಒತ್ತಡ ಹಾಕಿದ್ರು. ಲೋಕಸಭಾ ಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚವರನ್ನ ಯಾವ ರೀತಿ ನಡೆಸಿಕೊಂಡರು.? ಜಿಲ್ಲಾ ಉಸ್ತುವಾರಿ ಸಚಿವರು ಕುಮಾರಣ್ಣ ಕಾರ್ಯಕ್ರಮಕ್ಕೆ ಒಬ್ಬ ಅಧಿಕಾರಿಗಳು ಬರದ ರೀತಿ ಮಾಡಿದ್ರು. ಜನರಿಗೆ ನ್ಯಾಯ ಕೊಡಿಸಲು ಕುಮಾರಣ್ಣ ಮುಂದಾಗಿದ್ದಾರೆ. ಚಾಮರಾಜನಗರದಲ್ಲಿ ಕೊಟ್ಟ ಅರ್ಜಿಯನ್ನ ಕಸದ ಬುಟ್ಟಿಗೆ ಸಿಎಂ ಹಾಕಿದ್ದಾರೆ. ಅಂತಹ ನಾಯಕ ನಮ್ಮ ನಾಯಕ ಅಲ್ಲ, ಜನರ ಸಮಸ್ಯೆ ನಿವಾರಿಸುತ್ತಾರೆ. ರೈತರ ಪರ ಕುಮಾರಣ್ಣ ಇರ್ತಾರೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡ್ತಾರೆ ಎಂದು ಹೇಳಿದರು.