ವರದಿ : ವಿನಯ್ ದೊಡ್ಡಕೊಪ್ಪಲು
ಕೆಆರ್ ನಗರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಇಬ್ಬರು ಮಕ್ಕಳು ಸಾವನಪ್ಪಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ನಡೆದಿದೆ.
ತಾಲೂಕಿನ ಚೀರನಹಳ್ಳಿ ಗ್ರಾಮದ ಮಂಜುನಾಥ( 40) ಶುಕ್ರವಾರ ಸಂಜೆ 5.30 ರ ಸಮಯದಲ್ಲಿ ತನ್ನ ಮಗಳಾದ 10ನೇ ತರಗತಿ ವಿದ್ಯಾರ್ಥಿನಿ ಚೈತ್ರ (16) ಮತ್ತು 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗ ಶ್ರೇಯಸ್ ( 12) ಇಬ್ಬರನ್ನು ತನ್ನ ಜಮೀನಿನ ಬಳಿ ಕರೆದುಕೊಂಡು ಹೋಗಿ ಜತೆಯಲ್ಲಿ ವಿಷದ ಮಾತ್ರೆಗಳನ್ನು ಸೇವಿಸಿದ್ದಾನೆ.
ವಿಷಯ ತಿಳಿದ ಸಂಬಂಧಿಕರು ಮತ್ತು ಗ್ರಾಮ ಸ್ವರ ಮೂವರನ್ನು ಚಿಕಿತ್ಸೆಗಾಗಿ ಕೆ. ಆರ್. ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಶ್ರೇಯಸ್ ಮೃತಪಟ್ಟಿದ್ದು ಅನಂತರ ಮಂಜುನಾಥ್ ಮತ್ತು ಚೈತ್ರಳನ್ನು ಡಿ ಆರ್ ಎಂ ಆಸ್ಪತ್ರೆಗೆ ಸೇರಿಸಿದ ಸಂದರ್ಭದಲ್ಲಿ ಚೈತ್ರ ಸಹ ಮೃತಪಟ್ಟಿದ್ದಾಳೆ.
ಹಿನ್ನೆಲೆ: ಮಂಜುನಾಥನ ಹೆಂಡತಿ ಸುಮಿತ್ರ ಎರಡು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರಿಂದ ಮಂಜುನಾಥ ಖಿನ್ನತೆಗೆ ಒಳಗಾಗಿದ್ದ.ಈ ಘಟನೆಯಿಂದ ಮನನೊಂದು ತನ್ನ ಮಕ್ಕಳ ಜೊತೆಗೂಡಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿ ಅವರೊಡಗೂಡಿ ವಿಷದ ಮಾತ್ರೆ ಸೇವಿಸಿದ್ದಾನೆ.
ಈಗ ಮಂಜುನಾಥನ ಆರೋಗ್ಯ ಸ್ಥಿತಿಯೂ ಗಂಬೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಸಂಬಂದ ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.