Saturday, April 19, 2025
Google search engine

Homeರಾಜ್ಯವೀರಶೈವ ಮಹಾಸಭಾದ ನಿರ್ದೇಶಕರಾಗಿ ಗೌಡಹಳ್ಳಿ ಮಹದೇವಸ್ವಾಮಿ ಆಯ್ಕೆ

ವೀರಶೈವ ಮಹಾಸಭಾದ ನಿರ್ದೇಶಕರಾಗಿ ಗೌಡಹಳ್ಳಿ ಮಹದೇವಸ್ವಾಮಿ ಆಯ್ಕೆ

ಯಳಂದೂರು: ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾದ ತಾಲೂಕು ನಿರ್ದೇಶಕರಾಗಿ ಗೌಡಹಳ್ಳಿ ಗ್ರಾಮದ ಮಹದೇವಸ್ವಾಮಿ(ಮನು) ಈಚೆಗೆ ಪಟ್ಟಣದ ಕಾರಾಪುರ ವಿರಕ್ತ ಮಠದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಈ ಚುನಾವಣೆಯಲ್ಲಿ ಮಹದೇವಸ್ವಾಮಿ(ಮನು) ಹೊರತುಪಡಿಸಿ ಬೇರೆಯವರು ಯಾರೂ ನಿರ್ದೇಶಕ ಸ್ಥಾನಕ್ಕೆ ಅರ್ಜಿ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಎಸ್. ಸಿದ್ದಲಿಂಗಸ್ವಾಮಿ ಇವರ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮನು ಮಹಾಸಭಾದ ನಿಯಮಗಳಿಗನುಸಾರವಾಗಿ ಜನಸಾಮಾನ್ಯರ ಸೇವೆ ಮಾಡಿ, ಸಮಾಜದಲ್ಲಿ ಶಿಕ್ಷಣ, ಸಂಘಟನೆ ಅಭಿವೃದ್ಧಿಗೆ ಅಧ್ಯತೆ ನೀಡಿ ನಮ್ಮ ತಾಲೂಕು ಸಂಘವನ್ನು ಉತ್ತವಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರು, ನಿರ್ದೇಶಕರ ಸಹಯೋಗದೊಂದಿಗೆ ಪ್ರಮಾಣಿಕವಾಗಿ ದುಡಿಯುತ್ತೇನೆ ಎಂದರು.

RELATED ARTICLES
- Advertisment -
Google search engine

Most Popular