ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಆಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ ಮತ್ತು ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾಗಿರುವ ನಮ್ಮ ತಂಡದ 30 ಮುಂದಿಯನ್ನು ಸಮಾಜದ ಮತದಾರ ಬಾಂಧವರು ಆಶೀರ್ವದಿಸಿ ಆಯ್ಕೆ ಮಾಡಬೇಕು ಎಂದು ಹಿನಕಲ್ ಬಸವರಾಜು ಕೋರಿದರು.
ತಾಲೂಕಿನ ಲಾಲನಹಳ್ಳಿ ಗ್ರಾಮದಲ್ಲಿ ಶನಿವಾರ ಸಮಾಜದ ಮತ ಬಾಂಧವರ ಮನೆ ಮನೆಗೆ ತೆರಳಿ ಬೆಂಬಲ ಕೋರಿ ಮಾತನಾಡಿದ ಅವರು ಈ ಹಿಂದೆ ನಾನು ಜಿಲ್ಲಾ ಮಹಾಸಭಾ ಅಧ್ಯಕ್ಷನಾಗಿದ್ದಾಗ ಬಸವ ಭವನ ನಿರ್ಮಾಣಕ್ಕೆ ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸುವುದರ ಜೊತೆಗೆ ಸಮಾಜದ ಏಳಿಗೆಗೆ ಪ್ರಾಮಾಣಿಕನಾಗಿ ಕೆಲಸ ಮಾಡಿದ್ದು ಇದನ್ನು ಅರಿತು ಎಲ್ಲರೂ ಬೆಂಬಲ ನೀಡಬೇಕೆಂದರು.
ಜುಲೈ 21, ರಂದು ಭಾನುವಾರ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಿರುವ ನಮ್ಮ ತಂಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ತೆರಳಿ ವೀರಶೈವ ಲಿಂಗಾಯತ ಸಮಾಜದ ಬಾಂಧವರ ಬೆಂಬಲ ಯಾಚಿಸಿದ ಸಂದರ್ಭದಲ್ಲಿ ಸರ್ವರೂ ನಮಗೆ ಸಕಾರಾತ್ಮಕ ಅಗಿ ಸ್ಪಂದಿಸುತ್ತಿದ್ದು ಇದರಿಂದ ನಮ್ಮ ತಂಡ ಗೆಲುವಿನ ನಗೆ ಬೀರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ನಮ್ಮ ತಂಡಕ್ಕೆ ಪೂರ್ಣ ಬೆಂಬಲ ನೀಡಿದರೆ ಆಯ್ಕೆಯಾದ ಮೂರು ತಿಂಗಳೊಳಗೆ ಮೈಸೂರು ನಗರದಲ್ಲಿ ಬಸವ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವುದರೊಂದಿಗೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಾನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಅತಿ ಹೆಚ್ಚು ಸದಸ್ಯರನ್ನು ಸಂಘಕ್ಕೆ ನೋಂದಣಿ ಮಾಡಿಸಿದ್ದು ಇದರಿಂದ ನಮ್ಮ ಜಿಲ್ಲಾ ಸಂಘ ರಾಜ್ಯದಲ್ಲಿಯೇ ಸದಸ್ಯತ್ವ ಮತ್ತು ಮತದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಮುಂದೆ ಮತ್ತಷ್ಟು ಸದಸ್ಯರನ್ನು ನೋಂದಾಯಿಸಿ ಸಂಘವನ್ನು ಬಲಪಡಿಸಲು ಕಾರ್ಯ ಯೋಜನೆ ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದರು.
30 ನಿರ್ದೇಶಕ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 20 ಮಂದಿ ಪುರುಷರು ಮತ್ತು 10 ಮಂದಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು ವೀರಶೈವ ಲಿಂಗಾಯಿತ ಸಮಾಜದ ಏಳಿಗೆ ಮತ್ತು ಸಂಘದ ಅಭಿವೃದ್ಧಿಯ ದೃಷ್ಟಿಯಿಂದ ಸರ್ವರನ್ನು ಚುನಾಯಿಸಿ ಎಲ್ಲರ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಹಿನಕಲ್ ಬಸವರಾಜು ಮತ್ತು ಮೈಮುಲ್ ನಾಮ ನಿರ್ದೇಶಿತ ನಿರ್ದೇಶಕಿ ಮಲ್ಲಿಕಾ ರವಿಕುಮಾರ್ ಅವರನ್ನು ವೀರಶೈವ ಸಮಾಜದ ಮುಖಂಡರು ಸನ್ಮಾನಿಸಿದರು.
ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾದ ಎಲ್.ಪಿ.ಧರ್ಮ ಮಂಜುನಾಥ್, ಕೆ.ಗಿರಿಕುಮಾರ್, ಎನ್.ಜಿ. ಗಿರೀಶ್, ದಕ್ಷಿಣಾಮೂರ್ತಿ, ಟಿ.ಎಲ್.ನಾಗರಾಜು, ಕೆ.ನಾಗರಾಜು, ಎಂ.ಬಸವರಾಜು, ಬಿ.ವಿ.ಬಸವರಾಜು, ಕೆ.ಎಂ.ಮಾದಪ್ಪ, ಎಸ್.ಗಿರೀಶ್, ಡಾ.ಮಹದೇವಪ್ಪ, ಡಿ.ಮಹೇಶ್, ಕೆ.ಎಸ್.ಮಹದೇವಪ್ಪ, ಡಿ.ಮೋಹನಕುಮಾರ್, ಎಂ.ಎಸ್.ರೇಚಣ್ಣ, ಕೆ.ಶಿವಕುಮಾರ್, ಪಿ.ಶೇಖರ್, ಎಂ.ಷಡಕ್ಷರಿ, ಬಿ.ಸಂಪತ್, ಸುಂದರಸ್ವಾಮಿ, ಅನಸೂಯಗಣೇಶ್, ಎಸ್.ಎಸ್.ದಾಕ್ಷಾಯಿಣಿ ಎನ್.ಬಿ.ಭಾಗ್ಯಸುರೇಶ್, ರಾಜೇಶ್ವರಿ ಮಹೇಶ್ವರಿ, ರೂಪಸತೀಶ್, ವಿಮಲಮ್ಮ, ಹೆಚ್.ಎನ್.ಸರ್ವಮಂಗಳಮ್ಮ, ಸುಮಿತ್ರ ಅಂಕಪ್ಪ, ಸೌಭಾಗ್ಯ, ವೀರಶೈವ ಸಮಾಜದ ಹಿರಿಯ ಮುಖಂಡರಾದ, ಬಿ.ವಿ.ಬಸವರಾಜು, ದೂರಶಿವಕುಮಾರ್, ಹೇಮಗಿರೀಶ್, ತಿರ್ಥೇಶ್, ಗುರು, ಮಹದೇವ್, ಮನೋಹರಿ, ಮೈಮುಲ್ ನಿರ್ದೇಶಕಿ ಮಲ್ಲಿಕಾರವಿಕುಮಾರ್, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್ ಮತ್ತಿತರರು ಇದ್ದರು.