ಮಂಡ್ಯ: ಮದ್ದೂರಿನ ಆಬಲವಾಡಿಯಲ್ಲಿರುವ ತೋಪಿನ ತಿಮ್ಮಪ್ಪನ ಸನ್ನಿಧಿಯಲ್ಲಿ ಹರಿಸೇವೆ ಉತ್ಸವ ವಿಜೃಂಭಣೆಯಿಂದ ನಡೆದಿದೆ. ಉತ್ಸವದ ಅಂಗವಾಗಿ ಭಕ್ತರಿಗೆ ತಾವರೆ ಎಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಾವರೆ ಎಲೆಯಲ್ಲಿ ಊಟ ಮಾಡಿ ಪುನೀತರಾಗಿದ್ದಾರೆ.
ಮದ್ದೂರು ತಾಲೂಕಿನ ಆಬಲವಾಡಿಯಲ್ಲಿ ನಡೆಯುವ ತಾವರೆ ಎಲೆ ಊಟ. ತೋಪಿನ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವ ಹರಿಸೇವೆ ಉತ್ಸವದಲ್ಲಿ ಭಕ್ತರಿಗೆ ತಾವರೆ ಎಲೆ ಊಟ ಮಾಡಲಾಗಿತ್ತು ಹರಿಸೇವೆ ದಿನದ ತಾವರೆ ಎಲೆಕೂಟಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.
ಬರುವ ಭಕ್ತರಿಗೆಲ್ಲ ತಾವರೆ ಎಲೆಯಲ್ಲಿ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಸಾವಿರಾರು ಭಕ್ತರಿಂದ ಸಹಪಂಕ್ತಿ ಭೋಜನ ನಡೆಸಲಾಗುತ್ತದೆ . ತಾವರೆ ಎಲೆಯಲ್ಲಿ ಊಟಕ್ಕೆ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ ಪ್ರಸಿದ್ಧಿಯಾಗಿದೆ.
