ಕೆಆರ್ ಪೇಟೆ: ಭಗವಧ್ವಜ ಸ್ತಂಭ ತೆರವು ಮಾಡಲು ಅಧಿಕಾರಗಳು ಯತ್ನಿಸಿರುವ ಆರೋಪ ಕೇಳಿ ಬಂದಿದ್ದು, ಕೆ ಆರ್ ಪೇಟೆಯಲ್ಲಿ ಹಿಂದು ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಆರ್ ಪೇಟೆಯ ಟಿಬಿ ವೃತ್ತದಲ್ಲಿದ್ದ ಭಗವದ್ವಜ. ಹಲವು ವರ್ಷಗಳಿಂದ ಟಿಬಿ ವೃತ್ತದ ಮಧ್ಯದಲ್ಲಿ ಭಗವದ್ವಜ ನಿರ್ಮಿಸಲಾಗಿತ್ತು .ಭಗವಧ್ವಜದಲ್ಲಿ ಕಳಶದಾಕಾರದಲ್ಲಿ ಕೆಂಪೇಗೌಡ, ಡಾ ಬಿಆರ್ ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಬಸವಣ್ಣರ ಭಾವಚಿತ್ರ ನಿರ್ಮಿಸಲಾಗಿತ್ತು.
ರಾತ್ರೋರಾತ್ರಿ ಪುರಸಭೆ ಅಧಿಕಾರಿಗಳಿಂದ ತೆರವುಗೊಳಿಸಲು ಯತ್ನ ನಡೆಸಲಾಗಿದೆ. ಭಗವದ್ವಜ ತೆಗೆದು ಕಸದ ಟ್ರ್ಯಾಕ್ಟರ್ ನಲ್ಲಿ ಸಾಗಿಸಲು ಯತ್ನಿಸಲಾಗಿದೆ. ಟ್ರಾಕ್ಟರ್ ತಡೆದು ಭಗವದ್ವಜ ಕೊಂಡೊಯ್ಯದಂತೆ ಹಿಂದು ಪರ ಸಂಘಟನೆ ಕಾರ್ಯಕರ್ತರು ತಡೆದಿದ್ದಾರೆ.

ಘಟನೆ ಕುರಿತು ಕೆಆರ್ ಪೇಟೆ ಟಿಬಿ ವೃತ್ತದಲ್ಲಿ ಪ್ರತಿಭಟನೆ ನಡೆದಿದೆ . ಭಗವಧ್ವಜ ಮರು ಸ್ಥಾಪನೆ ಮಾಡುವಂತೆ ಹಿಂದು ಸಂಘಟನೆಗಳ ಒತ್ತಾಯ ಮಾಡಿವೆ.