ಮಂಡ್ಯ: ಮೈಸೂರು ಮುಡಾ ಹಗರಣದಲ್ಲಿ ಅವರ ಅನುಮತಿ, ಇಲ್ಲದೆ, ನೋಟಿಸ್ ನೀಡದೆ ಮುಡಾ ವಶಪಡಿಸಿಕೊಂಡಿದ್ದಾರೆ. ಮಾಧ್ಯಮದವರು ಸತ್ಯ ಬಿಟ್ಟು ಬೇರೆ ಕಡೆ ಹೋಗಬೇಡಿ ದೇಶ ಉಳಿಯುತ್ತೆ ಎಂದು ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಸಿಎಂ ಪತ್ನಿ ಅವರ ಅಣ್ಣ ಜಮೀನಿನ ಯಾವುದೇ ಮಾಹಿತಿ ಇಲ್ಲದೆ ಮುಡಾದಿಂದ ಪಡೆದುಕೊಂಡಿದ್ದಾರೆ. ಪರ್ಯಾಯವಾಗಿ ಇವರು ಜಮೀನು ಕೊಡುವಂತೆ ಅರ್ಜಿ ಕೊಟ್ಟಿದ್ದಾರೆ.
ಮುಡಾ ರೆಗ್ಯೂಲೆಷನ್ ತಪ್ಪಾಗಿದ್ದರೆ ಅಥವಾ ಇವರಿಗೆ ಹೆಚ್ಚು ಜಮೀನು ಕೊಟ್ಟಿದ್ರೆ ಅಥವಾ ಬೇರೆಯವರಿಗೆ ಹೆಚ್ಚು ಜಮೀನು ಕೊಟ್ಟಿದ್ರೆ ಅದು ಯಾರಿದು ತಪ್ಪು ಮುಡಾದು ತಪ್ಪು, ಯಾರ ಆಡಳಿತ ಬಿಜೆಪಿ ಆಡಳಿತ, ಮುಡಾ ಅಧ್ಯಕ್ಷ ಕೂಡ ಬಿಜೆಪಿ ಪಕ್ಷ. ವಿಜಯೇಂದ್ರ, ಅಶೋಕ್ ಪ್ರತಿಭಟನೆ ಮಾಡಬೇಕಿರೋದು ಒಂದು ಬಸವರಾಜ ಬೊಮ್ಮಾಯಿ ಮತ್ತೊಬ್ಬ ರಾಜೀವ್ ವಿರುದ್ದ ಮಾಡಲಿ ಎಂದು ಹೇಳಿದರು.
ತಪ್ಪು ಮಾಡಿದ್ರೆ ಎಲ್ಲರು ಒಂದೇ. ತಪ್ಪು ಮುಚ್ಚಿಹಾಕುಲು ಬಿಜೆಪಿ ಸಿದ್ದರಾಮಯ್ಯ ಅವರ ಹೆಸರು ತರ್ತಿದ್ದಾರೆ. ಸಿದ್ದರಾಮಯ್ಯ ಅವರು ಹೇಳಿದ್ದಾರೆ ಮುಡಾ ಗಲಿಜ್ ಅನ್ನು ಸಂಪೂರ್ಣವಾಗಿ ತೊಳೆಯುತ್ತೇನೆ ಅಂತ ಎಂದು ಹೇಳಿದರು.
ಚುನಾವಣಾ ಪ್ರಮಾಣ ಪತ್ರದಲ್ಲಿ ಘೋಷಣೆ ಮಾಡಿಕೊಳ್ಳದ ವಿಚಾರವಾಗಿ ಪ್ರತಿಕ್ರಿಯಿಸಿ ಅವರ ಹೆಸರಿಗೆ ಬರದೆ ಇದ್ದರಿಂದ ಘೋಷಣೆ ಮಾಡಿಲ್ಲ ಎಂದು ಹೇಳಿದರು.
ಟೆಕ್ನಿಕಲಿ ನೋಡದೆ ಮಾತನಾಡಲ್ಲ.ಇಡೀ ಪ್ರಕರಣ ಬಿಜೆಪಿಯವರಿಂದ ನಡೆದಿರುವ ತಪ್ಪು ಎಂದು ಹೇಳಿದರು.