ಮಂಡ್ಯ: ನಿಖಿಲ್ ಬಂಧನಕ್ಕೆ ಸಚಿವರೊಬ್ಬರಿಂದ ಷಡ್ಯಂತ್ರ ಹೆಚ್.ಡಿ ಕುಮಾರಸ್ವಾಮಿ ಆರೋಪದ ವಿಚಾರ ನಮಗೂ ಅದಕ್ಕೂ ಸಂಬಂದ ಇಲ್ಲ, ಪ್ಲಾನ್ ಮಾಡುವಂತದು ಯಾವುದು ಇಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಖಿಲ್ ಬಂಧನಕ್ಕೆ ಯಾರು ಪ್ಲ್ಯಾನ್ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ನನಗೆ ಗೊತ್ತಿಲ್ಲದೆ ಇರೋದ್ರ ಬಗ್ಗೆ ಮಾತನಾಡೋಲ್ಲ. ವಿಜಯೇಂದ್ರನನ್ನ ಪೊಲೀಸರು ವಶಕ್ಕೆ ಪಡೆದಿದ್ದರು ಆಮೇಲೆ ಬಿಟ್ಟರು. ಇದನ್ನೆಲ್ಲಾ ಪ್ಲ್ಯಾನ್ ಮಾಡೋದು ಏನಿದೆ. ಸಾರ್ವಜನಿಕರಿಗೆ ತೊಂದರೆ ಆಗಿದೆ ಅಂದಾಗ ವಶಕ್ಕೆ ತೆಗೆದುಕೊಂಡಿದ್ದಾರೆ ಆಮೇಲೆ ಬಿಡುತ್ತಾರೆ. ಅದು ಯಾವ ವಿಚಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.
ರೇವಣ್ಣ ಅವರ ವಿಚಾರವನ್ನು ಯಾರು ಹೆಚ್ಚು ಮಾಧ್ಯಮದ ಮುಂದೆ ಚರ್ಚೆ ಮಾಡಿದ್ದು ಅವರ ಕುಟುಂಬದವರೇ ಅವರು ಜೈಲಿಗೆ ಹೋದಮೇಲೆ ಮಾತನಾಡ್ತಿಲ್ಲ. ಅಚ್ಚರ್ಯ ಇದೆ, ಇದು ಯಾರ ಪ್ಲಾನ್ ಇದೆ ಗೊತ್ತಿಲ್ಲ. ಅವರ ಕುಟುಂಬದ ಮೇಲೆ ನಮಗೂ ಇದೆ. ಕಾನೂನು ಏನು ಮಾಡಕ್ಕಾಗಲ್ಲ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂ ನಷ್ಟಕುರಿತ ಲೋಕಾಯುಕ್ತ ವರದಿ ವಿಚಾರ. ಮಂಡ್ಯದಲ್ಲಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು.
ಅಧಿಕಾರಿಗಳು ತಪ್ಪು ಮಾಡಿರೋದು ಸಾಭಿತಾದ್ರೆ ಸರ್ಕರ ಕ್ರಮ ವಹಿಸಲಿದೆ. ಲೋಕಾಯುಕ್ತರು ಕೊಟ್ಟಿರೊ ವರದಿಯ ಆಧಾರದ ಮೇಲೆ ತನಿಖೆಯ ಅಗತ್ಯವಿದ್ರೆ ಸರ್ಕಾರ ಯಾವುದೇ ತನಿಖೆ ನಡೆಸಲು ಸಿದ್ದವಿದೆ. ಈ ಸಂಬಂಧ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡ್ತಿವಿ.
ಯಾವುದೇ ಟ್ರಯಲ್ ಬ್ಲಾಸ್ಟ್ ಮಾಡಲ್ಲ. ೧೫ ನೇ ತಾರೀಖು ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇವೆ ಟೆಕ್ನಿಕಲ್ ಟೀಮ್ ಜೊತೆ ಚರ್ಚೆಸಿ ತೀರ್ಮಾನ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ ರೈತರಿಗೆ ಭಾವನೆಗೆ ಸ್ಪಂದಿಸುವ ಕೆಲಸ ಮಾಡ್ತೇವೆ.
ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಭ್ರಷ್ಟರ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೆ ಎಂದು ಹೇಳಿದರು.