Saturday, April 19, 2025
Google search engine

Homeರಾಜ್ಯಕುಮಾರಸ್ವಾಮಿ ಗಿನ್ನಿಸ್ ದಾಖಲೆಗೆ ಸಾಕಾಗುವಷ್ಟು ಸುಳ್ಳು ಹೇಳುತ್ತಿದ್ದಾರೆ: ಎಂ. ಲಕ್ಷ್ಮಣ ಆರೋಪ

ಕುಮಾರಸ್ವಾಮಿ ಗಿನ್ನಿಸ್ ದಾಖಲೆಗೆ ಸಾಕಾಗುವಷ್ಟು ಸುಳ್ಳು ಹೇಳುತ್ತಿದ್ದಾರೆ: ಎಂ. ಲಕ್ಷ್ಮಣ ಆರೋಪ

ಬೆಂಗಳೂರು: ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಇದೀಗ ಗಿನ್ನಿಸ್ ದಾಖಲೆಗೆ ಸಾಕಾಗುವಷ್ಟು ಸುಳ್ಳು ಹೇಳಿದ್ದಾರೆ. ಮಂತ್ರಿಸ್ಥಾನಕ್ಕೆ ಗೌರವ ಕೊಟ್ಟು ೧೦% ಸುಳ್ಳು ಹೇಳುವುದು ಕಡಿಮೆ ಮಾಡಿ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಈಗ ಕೇಂದ್ರ ಮಂತ್ರಿಯಾಗಿರುವವರು. ಅವರಿಗೆ ಕನಿಷ್ಠ ಪರಿಜ್ಞಾನ ಇರಬೇಕಾಗಿತ್ತು. ಯಾವುದೇ ಜಮೀನು ನೋಟಿಫೈ ಅಥವಾ ಡಿನೋಟಿಫೈ ಆಗುವುದು ವ್ಯಕ್ತಿಯ ಹೆಸರ ಮೇಲೆ ಅಲ್ಲ. ಆ ಜಮೀನಿನ ಸರ್ವೇ ಸಂಖ್ಯೆ ಮೇಲೆ ಎಂದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮಾಧ್ಯಮಗೋಷ್ಠಿ ನಡೆಸಿ ಸತ್ತ ವ್ಯಕ್ತಿ ಹೆಸರಲ್ಲಿ ಹೇಗೆ ಡಿನೋಟಿಫಿಕೇಶನ್ ಆಗುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ. ನಿಮಗೆ ಈ ವಿಚಾರದಲ್ಲಿ ಟ್ಯೂಷನ್ ಮಾಡಿದವರನ್ನೇ ಒಮ್ಮೆ ಕೇಳಿನೋಡಿ. ನೋಟಿಫೈ ಅಥವಾ ಡಿನೋಟಿಫೈ ಮಾಡುವಾಗ ಜಾಗದ ಸರ್ವೇ ಸಂಖ್ಯೆ, ವಿಸ್ತೀರ್ಣವನ್ನು ತಿಳಿಸುತ್ತಾರೆ.

ಈ ೩ ಎಕರೆ ೧೬ ಗುಂಟೆ ಜಾಗದ ಡಿನೋಟಿಫಿಕೇಶನ್ ಪ್ರತಿಯೂ ನನ್ನ ಬಳಿ ಇದೆ. ಇದರಲ್ಲಿ ಯಾವುದಾದರೂ ವ್ಯಕ್ತಿಯ ಹೆಸರು ಇದೆಯೇ? ಇದ್ದರೆ ತೋರಿಸಿ. ಕುಮಾರಸ್ವಾಮಿ ಅವರೇ ಬಿಜೆಪಿ ಹಾಗೂ ಜೆಡಿಎಸ್ ನವರು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುವ ಉದ್ದೇಶಕ್ಕೆ ಟೈಪ್ ಮಾಡಿರುವುದನ್ನು ತೋರಿಸಬೇಡಿ. ನಿಜವಾದ ದಾಖಲೆ ತೋರಿಸಿ ಸ್ವಾಮಿ ಎಂದು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular